ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು

Chandrappa
Published on

ಚಿತ್ರದುರ್ಗ: ರೈತರ ತೋಟಗಳು ಒಣಗದಂತೆ ವಿದ್ಯುತ್ ಪೂರೈಕೆ, ಗುಣಮಟ್ಟದ ರಸ್ತೆ, ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವುದು ಸೇರಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿ ಕ್ಷೇತ್ರದ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

ಸಿರಿಗೆರೆ ಹೋಬಳಿ ಸಿದ್ಧಾಪುರ ಗ್ರಾಮದಲ್ಲಿ 4 ಕೋಟಿ ರೂ. ವೆಚ್ಚದ ನೂತನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಶಾಸಕನಾಗಿ ಆಯ್ಕೆಯಾದ ದಿನದಿಂದಲೂ ಸಾರ್ವಜನಿಕರ ಕಷ್ಟಗಳನ್ನು ಅರಿತು ಪರಿಹರಿಸುತ್ತ ಬಂದಿದ್ದೇನೆ. ಪ್ರಜ್ಞಾ ಪೂರ್ವಕವಾಗಿ ಅಭಿವೃದ್ಧಿ ಕೈಗೊಂಡು ಅಗತ್ಯ ಮೂಲಸೌಕರ್ಯ ಕಲ್ಪಿಸುತ್ತ ಬಂದಿದ್ದೇನೆ ಎಂದರು.

ಹೊಳಲ್ಕೆರೆ ತಾಲೂಕಿನ 495 ಹಳ್ಳಿಗಳಲ್ಲೂ ನಿತ್ಯ ಒಂದಲ್ಲೊಂದು ರೀತಿಯ ಅಭಿವೃದ್ಧಿ ಕಾಮಗಾರಿ ನಡೆಯುತ್ತ್ತಿವೆ. ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ರೂಪಾ ಪ್ರದೀಪ್, ಸದಸ್ಯರಾದ ಮೋಹನ್, ಬಸವರಾಜ್, ವೀರಭದ್ರಯ್ಯ, ರಾಜಣ್ಣ, ಪಂಚಾಚಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net