ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಿ

19-11
ಗೋಕಾಕ ತಾಲೂಕಿನ ಭಗೀರಥ ವೃತ್ತದಲ್ಲಿ ರಾಜಋಷಿ ಶ್ರೀ ಭಗೀರಥರ ಕಂಚಿನ ಮೂರ್ತಿ ಸ್ಥಾಪನೆ ಅಡಿಗಲ್ಲು ಕಾರ್ಯಕ್ರಮಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ ನೀಡಿದರು. ಉಪ್ಪಾರಹಟ್ಟಿಯ ನಾಗಲಿಂಗ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ, ಶಿವಪುತ್ರ ಜಕಬಾಳ, ಮಡ್ಡೆಪ್ಪ ತೋಳಿನವರ ಇತರರಿದ್ದರು.
Published on

ಗೋಕಾಕ, ಬೆಳಗಾವಿ: ಈ ಭಾಗದ ಜನರ ಬೇಡಿಕೆಗಳಿಗೆ ಸ್ಪಂದಿಸಿ ಅವುಗಳನ್ನು ಕಾರ್ಯಗತಗೊಳಿಸುವ ಮೂಲಕ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶಾಸಕ ರಮೇಶ ಜಾರಕಿಹೊಳಿ ಶ್ರಮಿಸುತ್ತಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ ಹೇಳಿದರು.

ತಾಲೂಕಿನ ಭಗೀರಥ ವೃತ್ತದಲ್ಲಿ ರಾಜಋಷಿ ಶ್ರೀ ಭಗೀರಥರ ಕಂಚಿನ ಮೂರ್ತಿ ಸ್ಥಾಪನೆಗೆ ಸೋಮವಾರ ಅಡಿಗಲ್ಲು ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅಭಿವೃದ್ಧಿ ಕಾರ್ಯಗಳಿಗೆ ನಾವೆಲ್ಲ ಸಂಘಟಿತರಾಗಿ ಶಾಸಕರೊಂದಿಗೆ ಕೈ ಜೋಡಿಸಬೇಕಿದೆ ಎಂದರು.

ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಶಿವಪುತ್ರ ಜಕಬಾಳ ಮಾತನಾಡಿ, ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮೂರ್ತಿ ಸ್ಥಾಪನೆ ಇಂದು ಕಾರ್ಯಗತವಾಗುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ. ಭಗೀರಥ ವೃತ್ತದಲ್ಲಿ ಭವ್ಯವಾದ ರಾಜಋಷಿ ಶ್ರೀ ಭಗೀರಥರ ಮೂರ್ತಿಯನ್ನು ಸ್ಥಾಪಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅವರ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.

ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಶ್ರೀ ಭಗೀರಥರ ಮೂರ್ತಿ ಸ್ಥಾಪನೆಯ ಅಡಿಗಲ್ಲು ಸಮಾರಂಭಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಉಪ್ಪಾರಹಟ್ಟಿಯ ನಾಗಲಿಂಗ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಮಡ್ಡೆಪ್ಪ ತೋಳಿನವರ, ಮಾಲದಿನ್ನಿ ಗ್ರಾಪಂ ಅಧ್ಯಕ್ಷೆ ರುಕ್ಮವ್ವ ಭರಮನ್ನವರ, ಉಪಾಧ್ಯಕ್ಷೆ ಸೀತವ್ವ ಮೆಳವಂಕಿ, ಮುಖಂಡರಾದ ಅಶೋಕ ಗೋಣಿ, ಹನುಮಂತ ದುರ್ಗನ್ನವರ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಭೀಮಶಿ ಭರಮನ್ನವರ, ಕುಶಾಲ ಗುಡೇನ್ನವರ, ಅಡಿವೆಪ್ಪ ಕಿತ್ತೂರ, ಲಕ್ಷ್ಮಣ ಬೂದಿಗೊಪ್ಪ, ಲಕ್ಕಪ್ಪ ಮಾಳಗಿ, ರಂಗಪ್ಪ ನಂದಿ, ರಮೇಶ ಭಂಡಿ, ಬೀರಪ್ಪ ದುರ್ಗಿಪೂಜೇರಿ, ಲಕ್ಕಪ್ಪ ಹೊಸಕುರಬರ, ಲಕ್ಕಪ್ಪ ನಾಯ್ಕ, ಮಹಾದೇವ ಭಂಡಿ, ಹನುಮಂತ ಕಿಚಡಿ, ಲಕ್ಷ್ಮಣ ಭಂಗಿ, ಮುತ್ತೆಪ್ಪ ಬೀರನಗಡ್ಡಿ, ಹನುಮಂತಗೌಡ ಪಾಟೀಲ, ಕರೆಪ್ಪ ಬಡಿಗವಾಡ, ಶಿವರಾಯಿ ದಂಡಿನ, ಶಿವಪುತ್ರ ದುರದುಂಡಿ, ಹನುಮಂತ ಯಡ್ರಾವಿ, ಲಕ್ಕಪ್ಪ ಭಂಡಿ, ಅನಿಲಕುಮಾರ ಕಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net