ಅಭಿವೃದ್ಧಿ ಕಾರ್ಯಕ್ಕೆ ಜನರ ಸಹಕಾರ ಅಗತ್ಯ

10-08-Shiva-6
ರಾಯಚೂರಿನ ಎನ್‌ಐಜಿ ಕಾಲನಿಯಲ್ಲಿ ಉದ್ಯಾನವನ ಮತ್ತು ದೇವಸ್ಥಾನ ಕಂಪೌಂಡ್ ನಿರ್ಮಾಣಕ್ಕೆ ನಗರಸಭೆ ಸದಸ್ಯ ಜಯಣ್ಣ ಗುರುವಾರ ಚಾಲನೆ ನೀಡಿದರು. ನಿವಾಸಿಗಳಾದ ಸುಧಾಕರ, ಸತೀಶ ಹಿರೇಮಠ, ಶಶಿಧರ ಹೂಗಾರ, ರಾಘವೇಂದ್ರ ಕುಲಕರ್ಣಿ, ಅಶೋಕ, ವಿಶಾಲಾಕ್ಷಿ, ಗಿರಿಜಾದೇವಿ, ಶ್ರೀದೇವಿ, ಶಿವಲೀಲಾ, ಗೀತಾ, ಮಂಜುಳಾ, ರೇಣುಕಾ ಇದ್ದರು.
Published on

ರಾಯಚೂರು: ನಗರಸಭೆಯಿಂದ ಹಮ್ಮಿಕೊಳ್ಳಲಾಗುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜನರ ಸಹಕಾರ ಅಗತ್ಯವಾಗಿದ್ದು, ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಗಮನ ಹರಿಸಬೇಕು ಎಂದು ನಗರಸಭೆ ಸದಸ್ಯ ಜಯಣ್ಣ ಹೇಳಿದರು.
ಸ್ಥಳೀಯ ಎನ್‌ಐಜಿ ಕಾಲನಿಯಲ್ಲಿ ಉದ್ಯಾನವನ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಕಂಪೌಂಡ್ ನಿರ್ಮಾಣಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ಕಾಲನಿಯ ಮಹಿಳೆಯರು ಮತ್ತು ದಾನಿಗಳು ಸೇರಿಕೊಂಡು ಉದ್ಯಾನವನ, ದೇವಸ್ಥಾನದ ಕಂಪೌಂಡ್ ನಿರ್ಮಾಣಕ್ಕೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದರು.
ಕಾಲನಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದಾಗ ನಗರಸಭೆಯಿಂದ ನೀರಿನ ಸಮಸ್ಯೆ ಪರಿಹರಿಸುವ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಒಳಚರಂಡಿ ವ್ಯವಸ್ಥೆ, ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲನಿ ನಿವಾಸಿಗಳಾದ ಸುಧಾಕರ, ಸತೀಶ ಹಿರೇಮಠ, ಶಶಿಧರ ಹೂಗಾರ, ರಾಘವೇಂದ್ರ ಕುಲಕರ್ಣಿ, ಅಶೋಕ, ವಿಶಾಲಾಕ್ಷಿ, ಗಿರಿಜಾದೇವಿ, ಶ್ರೀದೇವಿ, ಶಿವಲೀಲಾ, ಗೀತಾ, ಮಂಜುಳಾ, ರೇಣುಕಾ, ಶಂಕ್ರಮ್ಮ, ಬಸಮ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net