

ಕಾಗವಾಡ: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಲಕ್ಷಾಂತರ ಜನರ ಭಕ್ತಿಯ ನೆಲೆ ಯಾದ ಕಾಗವಾಡ ತಾಲೂಕಿನ ಮಂಗಸೂಳಿಯ ಮಲ್ಲಯ್ಯ (ಖಂಡೋಬಾ) ದೇವಸ್ಥಾನದ ಅಭಿವೃದ್ಧಿಗೆ 1.50 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಖಾತೆ ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.
ಮಂಗಸೂಳಿ ಮಲ್ಲಯ್ಯ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ, ದರ್ಶನ ಪಡೆದ ಅವರು ಕಾಮಗಾರಿ ಸ್ಥಳ ಪರಿಶೀಲಿಸಿದರು. ಕರ್ನಾಟಕ, ಮಹಾರಾಷ್ಟ್ರದ ಜಾಗೃತ ದೇವಸ್ಥಾನಗಳಲ್ಲಿ ಒಂದಾದ ಮಲ್ಲಯ್ಯ ದೇವಸ್ಥಾನಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಬರುತ್ತಾರೆ. ಈ ದೇಗುಲದ ಅಭಿವೃದ್ಧಿ ಪಡಿಸುವುದಕ್ಕೆ ಸಂಕಲ್ಪ ಹೊಂದಿದ್ದೆ. ಆ ಪ್ರಕಾರ 1.50 ಕೋಟಿ ರೂ. ಮಂಜೂರು ಮಾಡಿಸಲಾಗಿದೆ.
ಇಲ್ಲಿ ಫೇವರ್ ಬ್ಲಾಕ್ ಅಳವಡಿಕೆ, ಕಾಂಕ್ರೀಟ್ ರಸ್ತೆ ನಿರ್ಮಾಣ, 54 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ರವೀಂದ್ರ ಪೂಜಾರಿ, ದೇವಸ್ಥಾನ ಟ್ರಸ್ಟಿಗಳಾದ ಉಜ್ವಲಸಿಂಹ ಪವಾರ ದೇಸಾಯಿ, ಮಯೂರಸಿಂಹ ಪವಾರ ದೇಸಾಯಿ, ವಿಕ್ರಮ್‌ಸಿಂಹ ಪವಾರ ದೇಸಾಯಿ, ಮುಖಂಡರಾದ ಅಭಯ ಪಾಟೀಲ, ಚಿದಾನಂದ ಮಾಳಿ, ಮುಕುಂದ ಪೂಜಾರಿ, ಸಂಭಾಜಿ ಪಾಟೀಲ, ಬಾಬಾಸಾಬ ಪಾಟೀಲ, ಪುಂಡಲೀಕ ಪಾಟೀಲ, ಶಿವಾಜಿ ಪಾಟೀಲ ಹಾಗೂ ಇಂಜನಿಯರ್‌ಗಳಾದ ಕೆ. ರವಿ, ಸಚಿವರ ಆಪ್ತ ಸಹಾಯಕರಾದ ಸಚಿನ ದೇಸಾಯಿ, ಪ್ರಶಾಂತ ಅಪರಾಜ, ವಿನಾಯಕ ಶಿಂಧೆ ಇತರರಿದ್ದರು.