ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

Published on

ಚಾಮರಾಜನಗರ: ತಾಲೂಕಿನ ಕೊತ್ತಲವಾಡಿ, ಮಾದಲವಾಡಿ, ಯರಗನಹಳ್ಳಿ, ನಿಜಲಿಂಗನಪುರ, ಅರಕಲವಾಡಿ ಗ್ರಾಮಗಳಲ್ಲಿ ವಿಶೇಷ ಅಭಿವೃದ್ದಿ ಯೋಜನಯಡಿಯಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ದಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾನುವಾರ ಭೂಮಿಪೂಜೆ ನೆರವೇರಿಸಿದರು.


ಇದೇ ವೇಳೆ ಮಾತನಾಡಿದ ಅವರು, ಕೊತ್ತಲವಾಡಿ ಗ್ರಾಮದ ಲಿಂಗಾಯತರ ಬೀದಿಗೆ 20 ಲಕ್ಷ ರೂ., ಮಾದಲವಾಡಿ ಗ್ರಾಮದ ಕುರುಬ ಹಾಗೂ ಕುಂಬಾರ ಸಮುದಾಯದ ಬೀದಿಗೆ 20ಲಕ್ಷ ರೂ., ಯರಗನಹಳ್ಳಿಗೆ 20 ರೂ., ನಿಜಲಿಂಗನಪುರಕ್ಕೆ 20 ಲಕ್ಷ ರೂ., ಅರಕಲವಾಡಿ ಗ್ರಾಮದ ಲಿಂಗಾಯತರ ಬೀದಿಗೆ 25 ಲಕ್ಷ ರೂ. ಸೇರಿದಂತೆ 1.5 ಕೋಟಿ ರೂ.ವೆಚ್ಚದ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ವಿವರಿಸಿದರು.
ರಸ್ತೆ ಮತ್ತು ಚರಂಡಿ ಗ್ರಾಮಗಳ ಅಭಿವೃದ್ದಿಯ ಸಂಕೇತವಾಗಿದೆ. ತಮ್ಮ ಅಕಾರಾವಯಲ್ಲಿ ಕ್ಷೇತ್ರವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಆಯಾ ಗ್ರಾಮಸ್ಥರು ತಾವೇ ಮುಂದೆ ನಿಂತು ಅಭಿವೃದ್ದಿ ಕಾರ್ಯಕ್ಕೆ ಸಹಕಾರ ನೀಡಬೇಕು. ಕಾಮಗಾರಿ ನಿರ್ವಹಣೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಆಧ್ಯತೆ ನೀಡಬೇಕು, ನಿಗತ ಅವಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.


ಇದೇ ವೇಳೆ ಮಾದಲವಾಡಿ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ತೆ ನೀಗಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷರಾದ ಗೀತಾ, ಮೀನಾಕ್ಷಿ, ಉಪಾಧ್ಯಕ್ಷರಾದ ರತ್ನಮ್ಮ, ರೇಖಾ, ಮುಖಂಡರಾದ ಸೋಮಲಿಂಗಪ್ಪ, ಶಂಭಪ್ಪ, ಎ.ಎಸ್.ಗುರುಸ್ವಾಮಿ, ತಾಪಂ ಮಾಜಿಸದಸ್ಯ ಬಾಲಚಂದ್ರಮೂರ್ತಿ, ಮಲ್ಲಿಕಾರ್ಜುನಸ್ವಾಮಿ, ರಾಜೇಂದ್ರಪ್ರಸಾದ್, ಮಲ್ಲಿಕಾರ್ಜುನಸ್ವಾಮಿ, ಶಿವಬಸಪ್ಪ, ದೊರೆಸ್ವಾಮಿ, ಪ್ರಕಾಶ್, ಕುಮಾರ್, ಬಸವಣ್ಣ
ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net