

ಚಿತ್ರದುರ್ಗ: ನಗರ ವ್ಯಾಪ್ತಿಯ ವಿವಿಧೆಡೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಬುಧವಾರ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರ ವೇರಿಸಿದರು.
28.56 ಲಕ್ಷ ರೂ.ವೆಚ್ಚದಲ್ಲಿ ತಿಮ್ಮಣ್ಣನಾಯಕನ ಕೆರೆ ಏರಿಯ ಮೇಲೆ ಪಾಥ್‌ವೇ ಮತ್ತು ಅಲಂಕಾರಿಕ ವಿದ್ಯುತ್ ದೀಪ ಗಳು,ಜಿಮ್ ಮತ್ತು ಮಕ್ಕಳ ಆಟಿಕೆ ಸಾಮಾಗ್ರಿಗಳ ಅಳವಡಿಕೆ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ.31.67 ಲಕ್ಷ ರೂ.ವೆಚ್ಚದಲ್ಲಿ ಚಂದ್ರಮೌ ಳೇಶ್ವರ ಹೊಂಡದ ಪುಷ್ಕರಣೆ ಅಭಿವೃದ್ಧಿ ಹಾಗೂ ಜಿಮ್,ಮಕ್ಕಳ ಆಟಿಕೆ ಸಾಮಗ್ರಿ ಅಳವಡಿಸುವ ಕಾಮಗಾರಿ.
20.44 ಲಕ್ಷ ರೂ.ವೆಚ್ಚದಲ್ಲಿ ಕೋಟೆ ಕುರವತ್ತಿ ಈಶ್ವರ ದೇವಸ್ಥಾನದ ರಾಮದೇವರ ವಡ್ಡು ಏರಿ ಅಭಿವೃದ್ಧಿ. 19.92 ಲಕ್ಷ ರೂ.ವೆಚ್ಚದಲ್ಲಿ ಮೆದೇಹಳ್ಳಿಯಲ್ಲಿ ಪಾರ್ಕ್ ನಿರ್ಮಾಣ,ಅದೇ ಗ್ರಾಮದ ಉದ್ಯಾನ ಅಭಿವೃದ್ಧಿ. 17.43 ಲಕ್ಷ ರೂ.ವೆಚ್ಚದೊಂದಿಗೆ ನಗರದ ಕೆಳಗೋಟೆ ಚೆನ್ನಕೇಶವ ಸ್ವಾಮಿ ದೇವಸ್ಥಾನದ ಬಳಿಯ ಉದ್ಯಾನ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್,ಆಯುಕ್ತ ಸೋಮಶೇಖರ್,ಸದಸ್ಯರಾದ ಅಂಜಿನಪ್ಪ, ಸುರೇಶ್,ದೇವರಾಜ್,ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ ರಾಘವೇಂದ್ರ,ಆಯುಕ್ತೆ ಎಂ.ರೇಣುಕಾ,ಸದಸ್ಯೆ ಮೀನಾಕ್ಷಮ್ಮ,ಎಂ.ಕೆ.ಹಟ್ಟಿ ಗ್ರಾಪಂ ಅಧ್ಯಕ್ಷ ಗಣೇಶ್,ಮೆದೇಹಳ್ಳಿ ಗ್ರಾ ಪಂ ಅಧ್ಯಕ್ಷೆ ಕೆ.ಎನ್.ಕಾವ್ಯಾವಿಜಯಕುಮಾರ್,ಮಾಜಿ ಅಧ್ಯಕ್ಷ ವಿಜಯಕುಮಾರ್,ಸದಸ್ಯರಾದ ನಿಂಗಪ್ಪ, ರಾಜು, ಮಮತಾ, ರಮೇಶ್, ಪಿಡಿಒ ಪಾತಣ್ಣ ಇತರರು ಇದ್ದರು.