

ಕೊಳ್ಳೇಗಾಲ: ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸುಮಾರು 2.65 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎನ್.ಮಹೇಶ್ ಚಾಲನೆ ನೀಡಿದರು.
ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿಗೆ 25 ಲಕ್ಷ ರೂ., ಕಬಿನಿಯ ಟಿಎಸ್ಪಿ ಬುಡಕಟ್ಟು ಉಪಯೋಜನೆಯಡಿ ತಡೆಗೋಡೆ ನಿರ್ಮಾಣಕ್ಕೆ 90 ಲಕ್ಷ ರೂ., ಹೊಸಮಾಲಂಗಿಯ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 45 ಲಕ್ಷ ರೂ. ಹಾಗೂ ಆಲಹಳ್ಳಿ 30 ಲಕ್ಷ ರೂ., ಟಗರಪುರ ಮೋಳೆ 15 ಲಕ್ಷ ರೂ., ಚಿಲಕವಾಡಿ 5 ಲಕ್ಷ ರೂ., ಕುಂತೂರು ಗ್ರಾಮದಲ್ಲಿ 5.5 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ವಿಧಾನಸಭಾ ಕ್ಷೇತ್ರದ ಕಸಬಾ ವ್ಯಾಪ್ತಿಯ ಆರು ಗ್ರಾಮಗಳಲ್ಲಿ 2.65 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಸಂಬಂಧಪಟ್ಟ ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಗ್ರಾಮಸ್ಥರನ್ನು ವಿಶ್ವಾಸಪಡೆದು ಗುಣಮಟ್ಟದ ಕಾಮಗಾರಿ ನಡೆಸುವಂತೆ ಶಾಸಕ ಎನ್.ಮಹೇಶ್ ಸೂಚನೆ ನೀಡಿದರು.
ಮುಳ್ಳೂರು ಗ್ರಾಪಂ ಸದಸ್ಯರಾದ ನಂಜುಂಡಸ್ವಾಮಿ, ಪಿಡಿಒ ರಾಜೇಶ್, ಮಾಜಿ ಸದಸ್ಯ ಸೋಮಣ್ಣ ಉಪ್ಪಾರ್, ಕುಂತೂರು ಗ್ರಾಪಂ ಅಧ್ಯಕ್ಷ ಶಿವಣ್ಣ, ಸದಸ್ಯರಾದ ಷಣ್ಮುಖ, ಮಲ್ಲೇಶ್, ನಿಂಗಣ್ಣ, ಮಹೇಶ್, ಯಜಮಾನರಾದ ನಾಗೇಂದ್ರಪ್ಪ, ನಾಗೇಶಪ್ಪ, ಮಹದೇವಸ್ವಾಮಪ್ಪ ಮತ್ತಿತರಿದ್ದರು.