ಅಭಿವೃದ್ಧಿ ಕಾಮಗಾರಿ ವೀಕ್ಷಣೆ

khuba visit
Published on

ಬೀದರ್: ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಒಂಬತ್ತು ವರ್ಷವಾದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಸಂಪರ್ಕ ಸೇ ಸಮರ್ಥನ್ ಅಭಿಯಾನ ಮೂಲಕ ವಿಕಾಸ ತೀರ್ಥ ಕಾರ್ಯಕ್ರಮದಡಿ ನಗರದಲ್ಲಿ ಪೂರ್ಣಗೊಂಡ ಮತ್ತು ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಲಾಯಿತು.
ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್ ನೇತೃತ್ವದಲ್ಲಿ ಪಕ್ಷದ ಮುಖಂಡರು ಮತ್ತು ಸಾರ್ವಜನಿಕರ ಜತೆ ಕಾಮಗಾರಿಗಳ ವೀಕ್ಷಣೆ ಮಾಡಲಾಯಿತು. 94 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡು ಸಾರ್ವಜನಿಕರ ಸೌಲಭ್ಯಕ್ಕೆ ಬಳಕೆಯಾದ ನೌಬಾದ್-ಕೊಳಾರ್ ರಿಂಗ್ ರೋಡ್ (ರಾಷ್ಟ್ರೀಯ ಹೆದ್ದಾರಿ) ವೀಕ್ಷಿಸಿ, ಸುಮಾರು ಒಂದು ಕಿಮೀವರೆಗೆ ರಸ್ತೆಯಲ್ಲೇ ಮುಖಂಡರೊಂದಿಗೆ ನಡೆದುಕೊಂಡು ಹೋಗಿ ಕಾಮಗಾರಿ ಬಗ್ಗೆ ಸಚಿವರು ಚರ್ಚಿಸಿದರು.
ನಂತರ ನಗರದಲ್ಲಿ 175 ಕೋಟಿ ಅನುದಾನದಲ್ಲಿ ಪೈಪ್ ಮೂಲಕ ಎಲ್ಪಿಜಿ ಸರಬರಾಜು ಮಾಡುವ ಸಿಎನ್ಜಿ ಯೋಜನೆ ಕಾಮಗಾರಿಯ ಪ್ರಗತಿ ನೋಡಲಾಯಿತು. ಪ್ರಧಾನಿ ಮೋದಿ ನೇತೃತ್ವದಲ್ಲಿ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಳಾಗಿದ್ದು, ಜನತೆ ಸದುಪಯೋಗ ಪಡೆದುಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕ್ಷೇತ್ರದ ಜನತೆ ಕೇಂದ್ರ ಸರ್ಕಾರದ ಪ್ರಗತಿ ಕಾರ್ಯಗಳಿಗೆ ಸಹಕರಿಸುವುದರೊಂದಿಗೆ ಸ್ವತಃ ಪ್ರಚಾರ ಮಾಡುತ್ತಿದ್ದಾರೆ. ಇದೊಂದು ಸಂತೋಷದಾಯಕ ವಿಷಯ ಎಂದು ಖೂಬಾ ಹೇಳಿದರು.
ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಹಿರಿಯ ಮುಖಂಡ ಗುರುನಾಥ ಕೊಳ್ಳುರ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಪೂಜಾರಿ, ಪ್ರಮುಖರಾದ ಅರಹಂತ ಸಾವಳೆ, ಅಶೋಕ ಪಾಟೀಲ್, ಹೇಮಾ ತುಕ್ಕಾರಡ್ಡಿ, ಜಗನ್ನಾಥ ಪಾಟೀಲ್ ಸಿರಕಟನಳ್ಳಿ, ರಾಜು ಚಿದ್ರಿ, ಮಹೇಶ ಪಾಲಂ, ರಾಜು ಪಾಟೀಲ್, ಅಣೆಪ್ಪ ಖಾನಾಪುರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net