ಅಭಿಮಾನಿಗಳಿಂದ ರಕ್ತದಾನ, ಮೇವು ವಿತರಣೆ

vsv prasad birthday
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಸ್ವರ್ಣ ಸಮೂಹ ಸಂಸ್ಥೆಗಳ ಅಧ್ಯಕ್ಷ, ಸಮಾಜ ಸೇವಕ ಡಾ. ವಿ.ಎಸ್.ವಿ. ಪ್ರಸಾದ ಅವರ ಜನ್ಮದಿನದ ಅಂಗವಾಗಿ ಭಗತ್​ಸಿಂಗ್ ಸೇವಾ ಸಂಘದಿಂದ ಗುರುವಾರ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.

ಡೌನ್​ಚಾಳ ಬಾಲಾಜಿ ದೇವಸ್ಥಾನ ಬಳಿಯ ಗೋ ಶಾಲೆಗೆ ಮೇವು ವಿತರಣೆ ಮಾಡಲಾಯಿತು. ಬಳಿಕ ರಾಷ್ಟ್ರೆೊತ್ಥಾನ ರಕ್ತನಿಧಿ ಸಹಯೋಗದೊಂದಿಗೆ ಹುಬ್ಬಳ್ಳಿಯ ಸ್ವರ್ಣ ಪ್ಯಾರಡೈಸ್​ನಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಡಾ. ವಿ.ಎಸ್.ವಿ. ಪ್ರಸಾದ ಅಭಿಮಾನಿಗಳು, ಸಾರ್ವಜನಿಕರು ರಕ್ತದಾನ ಮಾಡಿದರು. ಸುಮಾರು 70 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಡಾ. ವಿ.ಎಸ್.ವಿ. ಪ್ರಸಾದ ಅವರನ್ನು ಸನ್ಮಾನಿಸಲಾಯಿತು. ವಿಶಾಲ ಜಾಧವ, ಸುನೀಲ ಬೂದೂರ, ರಂಗನಾಯಕ ತಪೇಲ, ಕುಮಾರ ಜಾಧವ, ಹರೀಶ ಸರ್ವಳೆ, ಪ್ರತೀಕ ಕುಂದಗೋಳ, ಗಂಗಾಧರ ಶೆಟ್ಟರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net