

ಚಿತ್ರದುರ್ಗ: ನಗರದ ಮದಕರಿನಾಯಕ ವೃತ್ತದ ಸಮೀಪ ನಾಡಿನ ಖ್ಯಾತ ನಟ ದಿ. ಡಾ.ವಿಷ್ಣುವರ್ಧನ್ ಅವರ 73ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಹೂವಿನ ಹಾರವನ್ನಾಕಿ ಜಯಂತಿ ಆಚರಿಸಲಾಯಿತು.
ಮದಕರಿ ಸರ್ಕಲ್ ಯುವಕರ ಸಂಘದ ಪದಾಧಿಕಾರಿಗಳು, ವಿಷ್ಣುವರ್ಧನ್ ಅಭಿಮಾನಿಗಳು ಕೇಕ್ ಕತ್ತರಿಸಿ, ಸಿಹಿ ವಿತರಿಸುವ ಮೂಲಕ ಆಚರಿಸಿದರು. ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದ ಮೇರು ನಟರಾಗಿ 200ಕ್ಕೂ ಅಧಿಕ ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ನಾಡು-ನುಡಿ, ನೆಲ-ಜಲ, ಭಾಷೆಯ ಉಳಿವಿಗಾಗಿ ನೀಡಿದ ಕೊಡುಗೆಯನ್ನು ಸ್ಮರಿಸಿದರು.