ಅಭಿಮಾನಿಗಳ ಪ್ರೀತಿಗೆ ಬೆಲೆಕಟ್ಟಲಾಗದು

17-1
ಮಹಾರಾಷ್ಟ್ರದ ಬಾರ್ಸಿ ಕೆಎಲ್‌ಇ ಸಿಲ್ವರ್ ಜುಬಿಲಿ ಹೈಸ್ಕೂಲ್‌ನಲ್ಲಿ ಶುಕ್ರವಾರ ಡಾ.ಪ್ರಭಾಕರ ಕೋರೆ ಅವರಿಗೆ ಸ್ಪರ್ಧಾತ್ಮಕ ಪುಸ್ತಕಗಳ ತುಲಾಭಾರ ನೆರವೇರಿಸಲಾಯಿತು. ಆಶಾತಾಯಿ ಕೋರೆ, ಮಹಾಂತೇಶ ಕವಟಗಿಮಠ, ಡಾ.ವಿ.ಐ. ಪಾಟೀಲ, ವಿ.ಎಸ್.ಸಾಧುನವರ, ಶಂಕರಣ್ಣ ಮುನವಳ್ಳಿ, ಪ್ರವೀಣ ಬಾಗೇವಾಡಿ, ಎಸ್.ಸಿ.ಮೆಟಗುಡ್ಡ, ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಇತರರಿದ್ದರು.
Published on

ಬೆಳಗಾವಿ: ಹಿತೈಷಿಗಳು, ವಿದ್ಯಾರ್ಥಿಗಳು ಹಾಗೂ ಅಭಿಮಾನಗಳ ಪ್ರೀತಿಗೆ ಬೆಲೆ ಕಟ್ಟಲಾಗದು. ಹಿರಿಯರ ಪುಣ್ಯದ ಫಲವಾಗಿ ನಾನು ಜೀವನದಲ್ಲಿ ಅಪ್ರತಿಮ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

ಮಹಾರಾಷ್ಟ್ರದ ಬಾರ್ಸಿಯಲ್ಲಿರುವ ಕೆಎಲ್‌ಇ ಸಂಸ್ಥೆಯ ಸಿಲ್ವರ್ ಜುಬಿಲಿ ಹೈಸ್ಕೂಲ್‌ನಲ್ಲಿ ಶುಕ್ರವಾರ ಡಾ.ಪ್ರಭಾಕರ ಕೋರೆ ಅವರ 75ನೇಯ ಅಮೃತ ಮಹೋತ್ಸವದ ನಿಮಿತ್ತ ಸ್ಪರ್ಧಾತ್ಮಕ ಪುಸ್ತಕಗಳ ತುಲಾಭಾರ ಸ್ವೀಕರಿಸಿ ಮಾತನಾಡಿದ ಅವರು, ಕೆಎಲ್‌ಇ ಸಪ್ತರ್ಷಿಗಳ ಕನಸುಗಳಿಗೆ ಪಥವಾಗಿ ಮುನ್ನಡೆಯಲು ನನಗೆ ಎಲ್ಲರೂ ಜತೆಯಾದರು ಎಂದರು.

ಒಬ್ಬ ವ್ಯಕ್ತಿ ಸಾಧನೆಯನ್ನು ಮಾಡಬೇಕಾದರೆ ಅದರ ಹಿಂದೆ ಗುರು-ಹಿರಿಯರ ಆಶೀರ್ವಾದ ಹಾಗೂ ಮಾರ್ಗದರ್ಶನ ಮುಖ್ಯವಾಗಿರುತ್ತದೆ. ನನ್ನ ಬದುಕಿನಲ್ಲಿ ಹಿರಿಯರ ಆಶೀರ್ವಾದವನ್ನು ನಾನೆಂದೂ ಗೌರವದಿಂದ ಸ್ವೀಕರಿಸುತ್ತೇನೆ. ವಿದ್ಯಾರ್ಥಿಗಳಾದ ನೀವು ಜೀವನದಲ್ಲಿ ಸಕಾರಾತ್ಮಕವಾಗಿದ್ದರೆ ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಇಂದು ನಮ್ಮ ಕೆಎಲ್‌ಇ ಸಂಸ್ಥೆಯು ಉತ್ತಮವಾದ ಶಿಕ್ಷಣ-ಆರೋಗ್ಯ ಹಾಗೂ ಸಂಶೋಧನೆಗಾಗಿ ಸಾಕಷ್ಟು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸುತ್ತಿದೆ. ಗುಣಾತ್ಮಕವಾದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇಲ್ಲಿ ನೀಡಿರುವ ಎಲ್ಲ ರೀತಿಯ ಸೌಲಭ್ಯ ಪಡೆಯುವ ಮೂಲಕ ವಿಶಿಷ್ಟವಾದ ಸಾಧನೆ ಮಾಡಬೇಕು.
ಭವಿಷ್ಯದಲ್ಲಿ ಸಮಾಜಕ್ಕೆ ಹಾಗೂ ದೇಶಕ್ಕೆ ಅದ್ವಿತೀಯವಾದ ಕೊಡುಗೆ ನೀಡುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಡಾ.ಪ್ರಭಾಕರ ಕೋರೆ ಹಾಗೂ ಆಶಾತಾಯಿ ಕೋರೆ ಅವರಿಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ, ಸಿಬ್ಬಂದಿ ಸತ್ಕರಿಸಿದರು. ಡಾ.ಪ್ರಭಾಕರ ಕೋರೆ ಅವರು
ತುಲಾಭಾರದಲ್ಲಿ ನೀಡಲಾದ ಸ್ಪರ್ಧಾತ್ಮಕ ಪುಸ್ತಕಗಳನ್ನು ಬಾರ್ಸಿ ಪ್ರೌಢಶಾಲೆಯ ಗ್ರಂಥಾಲಯಕ್ಕೆ ನೀಡಿದರು. ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಮಹಾಂತೇಶ ಕವಟಗಿಮಠ, ಡಾ.ವಿ.ಐ. ಪಾಟೀಲ, ವಿ.ಎಸ್.ಸಾಧುನವರ, ಶಂಕರಣ್ಣ ಮುನವಳ್ಳಿ, ಪ್ರವೀಣ ಬಾಗೇವಾಡಿ, ಅನಿಲ ಪಟ್ಟೇದ, ಎಸ್.ಸಿ.ಮೆಟಗುಡ್ಡ, ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net