ಅಭಿನವ ಸಿದ್ಧಲಿಂಗ ಶ್ರೀಗಳ ಅನುಷ್ಠಾನ ಮಂಗಲ

PH 05
Published on

ಕಲಬುರಗಿ: ಸಮೀಪದ ಸುಕ್ಷೇತ್ರ ಪಾಂಡವರ ಅಣಿಯಲ್ಲಿ ಮಡಕಿ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಕೈಗೊಂಡಿದ್ದ 47 ದಿನದ ಅನುಷ್ಠಾನ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು.

ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಶಿವಾಚಾರ್ಯರು, ಶ್ರೀ ಸಿದ್ದಮಲ್ಲ ಶಿವಾಚಾರ್ಯರು, ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರು, ಶ್ರೀ ನಿಜಲಿಂಗ ಶಿವಾಚಾರ್ಯರು, ಶ್ರೀ ಅಪ್ಪಾರಾವದೇವಿ ಮುತ್ಯಾ, ಶಿವಶರಣೆ ಸುಮಿತ್ರಮ್ಮ, ಶ್ರೀ ಲಿಂಗಾನಂದ ಶರಣರು ಸಾನ್ನಿಧ್ಯ ವಹಿಸಿದ್ದರು.

ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ್​, ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೊಡ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರವೀಣ ಮಡಿವಾಳ, ಸುಧಾಕರ್ ಮಡಿವಾಳ, ಸಂಜು ಕುಮಾರ್ ಬಿರಾದಾರ್ ಇವರಿಂದ ಶ್ರೀ ಸಿದ್ದಲಿಂಗ ಶಿವಾಚಾರ್ಯರ ತುಲಾಭಾರ ನಡೆಯಿತು.

ಸೈಯದ್ ಚಿಂಚೋಳಿ, ಗಣಜಲಖೇಡ, ಅಷ್ಟಗಾ, ಜಂಬಗಾ, ಕುಮಸಿ ಸೇರಿ ಇನ್ನಿತರ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಅಸಂಖ್ಯಾತ ಜನರು ಶ್ರೀಗಳ ದರ್ಶನಾಶೀರ್ವಾದ ಪಡೆದರು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net