ಬೇಲೂರು: ತಾಲೂಕಿನ ನಾರ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ಸುಲಗಳಲೆ ಗ್ರಾಮದ ಮಾಲಾಶ್ರೀ ಹಾಗೂ ಮಲ್ಲಿಕಾರ್ಜುನ್ ನಿವಾಸಕ್ಕೆ ಮಾಜಿ ಸಚಿವ ಬಿ.ಶಿವರಾಂ ಅವರು ಭಾನುವಾರ ತೆರಳಿ ಅಭಿನಂದಿಸಿದರು. ಕಾಂಗ್ರೆಸ್ ಮುಖಂಡರಾದ ತುಳಸಿದಾಸ್, ಭೂಪಾಲ್, ನಿಂಗರಾಜ್. ಹೇಮಂತ್, ಭದ್ರೇಶ್, ಗಂಗರಾಜ್, ಶಂಕರ್, ಶಾಕೀರ್, ಸಂತೋಷ ಇತರರು ಇದ್ದರು.