ಅಭಿನಂದನಾ ಸಮಾರಂಭ ಜು.9ಕ್ಕೆ

Allamprabhu Patil
Published on

ಕಲಬುರಗಿ: ೨೫ ರ‍್ಷದಿಂದ ಗ್ರಾಪಂ ಸದಸ್ಯ, ಅಧ್ಯಕ್ಷರಾಗಿ ಜನ ಸೇವೆ ಮಾಡಿದ ಪವನಕುಮಾರ ವಳಕೇರಿ ಅವರ ಅಭಿನಂದನಾ ಸಮಾರಂಭ ನಗರದ ಸಾಯಿ ಮಂದಿರ ಹತ್ತಿರದ ವೀರೇಂದ್ರ ಪಾಟೀಲ್​ ಕಲ್ಯಾಣ ಮಂಟಪದಲ್ಲಿ ಜು.೯ರಂದು ಬೆಳಗ್ಗೆ ೧೧ಕ್ಕೆ ನಡೆಯಲಿದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್​ ಹೇಳಿದರು.

ಅಭಿನಂದನೆ ನಿಮಿತ್ತ ಅನ್ನದಾಸೋಹ, ಸಸಿ ನೆಡುವುದು, ರಕ್ತದಾನ ಶಿಬಿರ, ದಂತ ಮತ್ತು ನೇತ್ರ ಚಿಕಿತ್ಸೆ ಶಿಬಿರ ಸೇರಿ ವಿವಿಧ ಸಾಮಾಜಿಕ ಸೇವಾ ಕರ‍್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್​ ಮುಖಂಡ ನೀಲಂಠರಾವ ಮೂಲಗೆ ಮಾತನಾಡಿ, ಸಮಾಜದಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿದ್ದ ೨೫ ಸಾಧಕರಿಗೆ ಸನ್ಮಾನ, ಜಿಲ್ಲೆಯ ಪ್ರಸಕ್ತ ರ‍್ಷ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀೆಯಲ್ಲಿ ಶೇ.೮೫ ಅಂಕ ಪಡೆದ ರ‍್ಕಾರಿ ಪ್ರೌಢ ಶಾಲೆ, ಕಾಲೇಜುಗಳ ವಿದ್ಯರ‍್ಥಿಗಳಿಗೆ ಸನ್ಮಾನ, ೧೦ ವೃದ್ಧಾಶ್ರಮದಲ್ಲಿ ಏಕಕಾಲಕ್ಕೆ ದಾಸೋಹ ವಿತರಿಸಲಾಗುವುದು ಎಂದರು.

ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಾ ರ‍್ಶನಾಪೂರ ಉದ್ಘಾಟಿಸಲಿದ್ದಾರೆ. ಶಾಸಕ ಅಲ್ಲಮಪ್ರಭು ಪಾಟೀಲ್​ ಅಧ್ಯಕ್ಷತೆ ವಹಿಸಲಿದ್ದಾರೆ. ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಜಿಡಗಾ -ಮುಗಳಖೋಡದ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ, ಬಬಲಾದದ ಶ್ರೀ ಗುರುಪಾದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಸಂಗಮೇಶ ನಾಗನಹಳ್ಳಿ, ಸುರೇಶ ಬಡಿಗೇರ, ಗಣೇಶ ವಳಕೇರಿ. ಲೋಹಿತ ಕಲ್ಲೂರ, ಮಲ್ಲಿನಾಥ ನಾಗನಹಳ್ಳಿ, ಸಂತೋಷ ತಳವಾರ, ನಂದಕುಮಾರ ನಾಯಕ, ಮಾಲಾ ಕಣ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net