

ಯಾದಗಿರಿ: ಇಲ್ಲಿಗೆ ಸಮೀಪದ ಶ್ರೀಕ್ಷೇತ್ರ ಅಬ್ಬೆತುಮಕೂರ ವಿಶ್ವಾರಾಧ್ಯ ಮಠದಲ್ಲಿ ಮಠಾಧೀಶ ಡಾ.ಗಂಗಾಧರ ಸ್ವಾಮಿಗಳ ಸಾನ್ನಿಧ್ಯದಲ್ಲಿ ನವರಾತ್ರಿ ನಿಮಿತ್ತ ಗುರುವಾರದಿಂದ ಆರಂಭವಾದ ಭಘಳಾಂಬಿಕಾ ದೇವಿ ಪೂಜೆ, ದೇವಿ ಪಾರಾಯಣ ಮತ್ತು ಉಡಿ ತುಂಬುವ ಕಾರ್ಯಕ್ರಮದ ಎರಡನೇ ದಿನ ಶುಕ್ರವಾರ ದೇವಿಗೆ ವಿಶೇಷ ಪೂಜೆ ಮತ್ತು ಮಂಗಳರಾತಿ ನೆರವೇರಿತು.
ಈ ವೇಳೆ ಸೇರಿದ ಭಕ್ತರನ್ನು ಉz್ದೆÃಶಿಸಿ ಮಾತನಾಡಿದ ಶ್ರೀಗಳು, ಭಾರತ ದೇಶ ಧಾರ್ಮಿಕ ಉತ್ಸವದ ತವರೂರು. ಇಲ್ಲಿ ಪ್ರತಿಯೊಂದ ಆಚರಣೆಗೂ ಒಂದು ಕಾರಣ ಮತ್ತು ಉz್ದÉÃಶವಿದೆ. ಶತ, ಶತಮಾನಗಳ ಹಿಂದೆ ಪೂಜ್ಯರು, ಹಿರಿಯರು ನಾಡಿಗೆ ಒಳಿಗಾಗಲಿ, ಜನರ ಕಲ್ಯಾಣವಾಗಲಿ ಎಂಬ ಉz್ದÉÃಶದಿಂದ ಐತಿಹಾಸಿಕ ಕಾರಣಗಳಿಂದಲೇ ಇಂತಹ ಹಬ್ಬ, ಉತ್ಸವಗಳನ್ನು ಆಚರಣೆಗೆ ತಂದಿದ್ದಾರೆ. ನಾವು ಕೂಡ ಅವುಗಳನ್ನು ಮುಂದುವರೆಸಿಕೊAಡು ಹೋಗುವ ಮೂಲಕ ಎಲ್ಲರ ಹಿತ ಬಯಸೋಣ ಎಂದರು.
ಭಘಳಾAಬಿಕಾ ದೇವಿ ವಿಶ್ವಾರಾಧ್ಯರ ತಪ್ಪಸ್ಸಿಗೆ ಮೆಚ್ಚಿ ವರ ನೀಡಿದ ಜಗನ್ಮಾಥೆಯಾಗಿದ್ದಾಳೆ. ಇವಳ ಆರಾಧನೆಯಿಂದ ಬಂದ ಕಷ್ಟಗಳು ಬಯಲಾಗಿಲಿವೆ. ಇಲ್ಲಿ ದೇವಿ ಮತ್ತು ವಿಶ್ವಾರಾಧ್ಯರು ನೆಲೆಸಿದ್ದಾರೆ. ಇಲ್ಲಿಗೆ ಬಂದು ಹೋಗುವ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಮಲ್ಲಿಕಾರ್ಜುನ ಶಾಸ್ತಿç, ಬಸವರಾಜ ಶಾಸ್ತಿç ಅವರಿಂದ ದೇವಿ ಪಾರಾಯಣ ಮಂತ್ರ ಘೋಷ ನಡೆದವು. ಐದು ಸುತ್ತಿನ ಮಂಗಳರಾತಿಯನ್ನು ಶ್ರೀಗಳು ಮತ್ತು ಕಿರಿಯ ಶ್ರೀಗಳು ದೇವಿಗೆ ಅರ್ಪಿಸಿದರು. ಮಠದ ಸಂಗೀತ ಬಳಗದಿಂದ ದೇವಿ ಪ್ರಾರ್ಥನೆ ನಡೆಯಿತು. ಅನೇಕ ಮಹಿಳೆಯರಿಗೆ ಉಡಿ ತುಂಬಲಾಯಿತು. ನಂತರ ಪ್ರಸಾದ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.