ಅಬ್ದುಲ್ ಕಲಾಂ ಬದುಕು ಸ್ಫೂರ್ತಿ- ಡಾ.ವಿಲಾಸ ಜೋಶಿ

0102
Published on

ಬೋರಗಾಂವ: ಕಡು ಬಡತನದಲ್ಲಿ ಬೆಳೆದ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡಿ ಆದರ್ಶವಾಗಿದ್ದಾರೆ. ಅವರ ಬದುಕು ನಮಗೆಲ್ಲ ಸ್ಫೂರ್ತಿಯಾಗಿದೆ ಎಂದು ಡಾ.ವಿಲಾಸ ಜೋಶಿ ಹೇಳಿದರು.

ಪಟ್ಟಣದಲ್ಲಿ ಮಾಜಿ ರಾಷ್ಟ್ರಪತಿ ದಿ.ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದ ನಿಮಿತ್ತ ಅಬ್ದುಲ್ ಕಲಾಂ ಯೂತ್ ೌಂಡೇಶನ್ ಹಾಗೂ ಸಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಶಿಬಿರದಲ್ಲಿ 500ಕ್ಕೂ ಹೆಚ್ಚು ಜನರು ಉಚಿತ ಆರೋಗ್ಯ ತಪಾಸಣೆ ಪ್ರಯೋಜನ ಪಡೆದರು. 52 ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ನಿವೃತ್ತ ಪ್ರಾಧ್ಯಾಪಕ ಸರ್ದಾರ ಅರಾಜ, ಡಾ.ಆರ್ೀ ಮುಜಾವರ, ಡಾ.ಗಿರೀಶ ಕುಲಕರ್ಣಿ, ಡಾ.ರಾಹುಲ್ ಪಟ್ಟೇಕರಿ, ಡಾ.ಅಕ್ಷಯ ಉಗಾರೆ, ಡಾ.ಅವಿನಾಶ ರಾಥೋಡ್, ಡಾ.ಆರ್ೀ ಕಲಾವಂತ, ಡಾ.ಮಧುರಾ ಮಹಾಜನ, ತುಷಾರ ಕಾಂಬಳೆ, ಅಜರುದ್ದೀನ್ ಶೇಖಜಿ, ರಾಬರ್ಟ್ ಡಿಸೋಜ, ಬಾಳು ಅರಾಜ್, ಪಿಎಸ್‌ಐ ಎಸ್.ಎಸ್.ತಳವಾರ, ಸಂತೋಷ ಬಡೋದೆ, ಬಶೀರ್ ಮುಜಾವರ ಹಾಗೂ ೌಂಡೇಶನ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net