ಗಾಂಜಾ ಬೆಳೆದಿದ್ದವನ ಬಂಧನ

19..pyp..01
Published on


ಪಿರಿಯಾಪಟ್ಟಣ ತಾಲೂಕಿನ ಸುಳಗೋಡು ಗ್ರಾಮದ ಜಮೀನಿನಲ್ಲಿ ಬೆಳೆಯಲಾಗಿದ್ದ ಗಾಂಜಾ ಗಿಡಗಳನ್ನು ಅಬಕಾರಿ ಸಿಬ್ಬಂದಿ ಶುಕ್ರವಾರ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಸುಳಗೋಡು ಗ್ರಾಮದ ರಾಮೇಗೌಡ ತನ್ನ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಪಅಧೀಕ್ಷಕ ವಿಜಯಕುಮಾರ್ ನೇತೃತ್ವದ ತಂಡ ಆರೋಪಿಯನ್ನು ಮಾಲು ಸಮೇತ ಬಂಧಿಸಿತು. 10 ಗಾಂಜಾ ಗಿಡಗಳನ್ನು ಬೆಳೆಯಲಾಗಿತ್ತು ಎಂದು ಅಬಕಾರಿ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು.
ಪಿರಿಯಾಪಟ್ಟಣ ವಲಯ ಅಬಕಾರಿ ನಿರೀಕ್ಷಕ ಧರ್ಮರಾಜು, ಸಿಬ್ಬಂದಿ ಕುಮಾರ್, ಅಜಯ್‌ಬೇಗ್, ಚೌತಿ ಗ್ರಾಮ ಪಂಚಾಯಿತಿ ಪಿಡಿಒ ಮೋಹನ್, ಗ್ರಾ.ಪಂ. ಸದಸ್ಯ ಮೋಹನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net