

ಕಲಬುರಗಿ: ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಶುಕ್ರವಾರ ನಗರಕ್ಕೆ ಆಗಮಿಸಲಿದ್ದು, ಸಂಜೆ ೪.೩೦ಕ್ಕೆ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಷನ್‌ನಿಂದ ಸನ್ಮಾನಿಸಿ, ಚರ್ಚೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಅಶೋಕ ಗುತ್ತೇದಾರ ಬಡದಾಳ ತಿಳಿಸಿz್ದÁರೆ. ಜಿಲ್ಲೆಯ ಎಲ್ಲ ಸನ್ನದುದಾರರು ಸೂಪರ್ ಮಾರ್ಕೆಟ್ ಸಮೀಪದ ಹೆರಿಟೇಜ್ ಇನ್ ಹೊಟೇಲ್‌ನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಿ, ವ್ಯಾಪಾರಸ್ಥರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಎಲ್ಲ ಸನ್ನದುರಾರರು ಭಾಗವಹಿಸಬೇಕು ಎಂದು ಅಸೋಸಿಯೇಷನ್ ಗೌರವಾಧ್ಯಕ್ಷ ವೀರಯ್ಯ ಗುತ್ತೇದಾರ್, ಉಪಾಧ್ಯಕ್ಷ ಆರ್.ಪಿ.ರೆಡ್ಡಿ, ಕಾರ್ಯದರ್ಶಿ ವೆಂಕಟೇಶ ಕಡೇಚೂರ ಮನವಿ ಮಾಡಿದ್ದಾರೆ.