

ಕಲಬುರಗಿ: ಕರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಮದ್ಯ ಉತ್ಪಾದನೆ, ಸಾಗಾಣಿಕೆ ಹಾಗೂ ಮಾರಾಟ ನಿಷೇಧಿಸಲಾಗಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಕಲಬುರಗಿ ಉಪವಿಭಾಗದ ವ್ಯಾಪ್ತಿಯಲ್ಲಿ ಏಪ್ರಿಲ್ 7 ರಿಂದ 21ರವರೆಗೆ ಒಟ್ಟು 111 ಅಬಕಾರಿ ದಾಳಿ ನಡೆಸಿ 13 ಪ್ರಕರಣ ದಾಖಲಿಸಿದ್ದಾರೆ ಎಂದು ಕಲಬುರಗಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಕಚೇರಿ ತಿಳಿಸಿದೆ.
235.710 ಲೀಟರ್ ಮದ್ಯ, 2.600 ಲೀ. ಬೀಯರ್, 66 ಲೀ. ಸೇಂಧಿ, 43 ಲೀ. ಕಳ್ಳಭಟ್ಟಿ ಸಾರಾಯಿ, 260 ಲೀ. ಬೆಲ್ಲದ ಕೊಳೆ ಮತ್ತು 1.700 ಸಿ.ಹೆಚ್., 1.500 ಗ್ರಾಂ ಪೇಸ್ಟ್, ಮೂರು ದ್ವಿಚಕ್ರ ವಾಹನ, ಎರಡು ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಪರಾರಿಯಾದ ಆರೋಪಿಗಳ ಬಂಧನಕ್ಕೆ ಕಾಯರ್ಾಚರಣೆ ಮುಂದುವರಿದಿದೆ. ಒಟ್ಟು ಜಪ್ತಿ ಮಾಡಲಾದ ವಸ್ತು ಹಾಗೂ ವಾಹನಗಳ ಮೌಲ್ಯ 6,32,845 ರೂ. ಆಗಲಿದೆ.