ಅಫಜಲಪುರದಲ್ಲಿ ಬಸ್ ಸಂಚಾರ ಸ್ಥಗಿತ

11-12 AFZ-1 A
Published on

ಅಫಜಲಪುರ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಅನಿರ್ದಿಷ್ಟ ಅವಧಿವರೆಗೆ ಮುಷ್ಕರ ಕೈಗೊಂಡಿದ್ದರಿಂದ ಜನರು ಪರದಾಡುವಂತಾಯಿತು. ಇಲ್ಲಿನ ಬಸ್ ಡಿಪೋದಲ್ಲಿ ಒಟ್ಟು 70 ಬಸ್ ಹಾಗೂ 270 ಸಿಬ್ಬಂದಿ ಇದ್ದಾರೆ. ಎಲ್ಲ ಬಸ್ ಸಂಚಾರ ನಿಲ್ಲಿಸಿದ್ದು, ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಪ್ರಯಾಣಿಕರಿಗೆ ಯಾವುದೇ ಮಾಹಿತಿಯಿಲ್ಲದೆ ಇರುವುದರಿಂದ ಬಸ್ ನಿಲ್ದಾಣದವರೆಗೂ ಬಂದು ವಾಪಸ್ ಹೋಗವಂತ ಪರಿಸ್ಥಿತಿ ಉಂಟಾಯಿತು. ಇನ್ನು ಖಾಸಗಿ ವಾಹನ ಚಾಲಕರು ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net