ಅಫಜಲಪುರದಲ್ಲಿ ಪಂಪ್‌ಸೆಟ್, ಬೈಕ್ ಕಳ್ಳರ ಬಂಧನ

PH 05
Published on

ಅಫಜಲಪುರ: ಜಮೀನುಗಳಲ್ಲಿ ಅಳವಡಿಸಿದ್ದ ಪಂಪ್‌ಸೆಟ್ ಹಾಗೂ ಹಲವು ಬೈಕ್‌ಗಳನ್ನು ಕದಿಯುತ್ತಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಭೋಸಗಾದ ರೇವಣಸಿದ್ದ ಬಿರಾದಾರ, ದೇವಣಗಾಂವದ ಮಂದಾರ ಅಳ್ಳಗಿ, ನಾಗರಾಜ ಅಳ್ಳಗಿ ಬಂಧಿತರು. ಇವರಿಂದ ವಿವಿಧ ಕಂಪನಿಗಳ 40 ಸಾವಿರದ 3 ಪಂಪ್‌ಸೆಟ್, 2.40 ಲಕ್ಷದ 5 ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ. ಬೆಳೆಗಳಿಗೆ ನೀರಾವರಿ ಕಲ್ಪಿಸಲು ನದಿ ತೀರದಲ್ಲಿ ಅಳವಡಿಸಿದ್ದ ಪಂಪ್‌ಸೆಟ್‌ಗಳನ್ನು ಕದಿಯುತ್ತಿದ್ದರು. ಅಲ್ಲದೆ ಪಟ್ಟಣ ಇತರ ಕಡೆಯ ಬೈಕ್‌ಗಳನ್ನು ಹೊತ್ತೊಯ್ಯುತ್ತಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ಇಶಾ ಪಂತ್, ಎಎಸ್‌ಪಿ ಶ್ರೀನಿಧಿ, ಡಿವೈಎಸ್‌ಪಿ ಗೋಪಿ ಆರ್., ಸಿಪಿಐ ಪಂಡಿತ ಸಗರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಸಿದ್ಧೇಶ್ವರ ಗೆರೆಡೆ, ಮಡಿವಾಳಪ್ಪ ಬಾಗೋಡಿ ನೇತೃತ್ವದಲ್ಲಿ ಸಿಬ್ಬಂದಿ ಸಂತೋಷ, ಕಾಶೀನಾಥ, ಆನಂದ, ಯಲ್ಲಪ್ಪ ಕಾರ್ಯಾಚರಣೆ ನಡೆಸಿ ಚೋರರನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net