

ಅಫಜಲಪುರ: ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಲು ಕ್ರೀಡೆ ಅವಶ್ಯಕ. ಪ್ರತಿಯೊಬ್ಬರೂ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಶಾಸಕ ಎಂ.ವೈ.ಪಾಟೀಲï ಹೇಳಿದರು.
ಚಿಂಚೋಳಿ ಗ್ರಾಮದ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಕ್ರೀಡೆಯಿಂದ ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾವಳಿಯಿಂದ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಮಕ್ಕಳ ಬಗ್ಗೆ ಪಾಲಕರು ಹಾಗೂ ಶಿP್ಷÀಕರು ಹೆಚ್ಚಿನ ನಿಗಾ ವಹಿಸಬೇಕು ಎಂದರು.
ಬಿಇಒ ಮಾರುತಿ ಹುಜರತಿ ಮಾತನಾಡಿ, ಕ್ರೀಡೆಯಿಲ್ಲದ ಜೀವನ ಕೀಟ ಹತ್ತಿದ ಗಿಡಕ್ಕೆ ಸಮಾನ. ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಆರೋಗ್ಯವಂತ ಜೀವನಕ್ಕೆ ದೈಹಿಕ ಕಸರತ್ತು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಶ್ರೀ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಜಮಾದಾರ, ಉಪಾಧ್ಯಕ್ಷೆ ಭಾಗಪ್ಪ ಕೊಳ್ಳಿ, ಕ್ಷೇತ್ರ ಸಮನ್ವಯಾಧಿಕಾರಿ ವಿ.ವೈ. ಗುಡುಮಿ, ಪ್ರಮುಖರಾದ ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡ, ಹೈದರಸಾಬ್ ಚೌಧರಿ, ಮಹಾಂತೇಶ ಬಬಲೇಶ್ವರ, ಶಂಕ್ರಯ್ಯ ಹಿರೇಮಠ, ಮಹೇಶ ಹೂಗಾರ, ನಾಗೇಶ ಗಂಗನಳ್ಳಿ, ಎಚ್.ಎಸ್.ಪಾಟೀಲ್, ಸಿದ್ದಣ್ಣ ಚಿಂಚೋಳಿ, ಪ್ರಕಾಶ ಚಾಂದಕವಟೆ, ಶಿವಪುತ್ರ ಬಾಕೆ ಇತರರಿದ್ದರು.