ಕೊಳ್ಳೇಗಾಲ: ಇತ್ತೀಚೆಗೆ ಮಲೇಷಿಯಾದ ಜಾರ್ಜ್ ಟೌನ್‌ನ ಪೆನಾಂಗ್ ಹಾಗೂ ಬಟುಕೇವ್ಸ್ ಕೌಲಲಂಪುರ್‌ನಲ್ಲಿ ನಡೆದ ಇಂಟರ್ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಫೆಸ್ಟಿವಲ್ ನವರಾತ್ರಿ ನಾಟ್ಯ ಅರ್ಪಣ ಎಂಬ ಕಾರ್ಯಕ್ರಮದಲ್ಲಿ ಕೊಳ್ಳೇಗಾಲದ ಅಪ್ಸರಿಕಾ (9) ಭಾಗವಹಿಸಿ ಗಮನಸೆಳೆದಿದ್ದಾಳೆ.
ಕೊಳ್ಳೇಗಾಲ ಪಟ್ಟಣದ ಜಿ.ಪಿ.ಮಲ್ಲಪ್ಪಪುರಂನ ಡಾ.ಯೋಗೇಶ್, ಡಾ.ಚೇತನಾ ದಂಪತಿ ಪುತ್ರಿ ಅಪ್ಸರಿಕಾ. ಬೆಂಗಳೂರಿನ ಲಾರೆನ್ಸ್ ಹೈ ಸ್ಕೂಲ್(ಐಸಿಎಸ್‌ಇ)ನಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಬೆಂಗಳೂರಿನ ಜೆ.ಎಸ್.ಅಕಾಡೆಮಿಯಲ್ಲಿ ಭರತನಾಟ್ಯ ನೃತ್ಯ ತರಬೇತಿ ಪಡೆಯುತ್ತಿದ್ದಾಳೆ.