ಅಪ್ರಾಪ್ತೆಯ ಜತೆಗೆ ವಿವಾಹವಾಗಿರುವ ಗ್ರಾ.ಪಂ ಅಧ್ಯಕ್ಷನ ಮೇಲೆ ದೂರು ದಾಖಲು

Crime
Published on

ಅಪ್ರಾಪ್ತೆಯ ಜತೆಗೆ ವಿವಾಹವಾಗಿರುವ ಗ್ರಾ.ಪಂ ಅಧ್ಯಕ್ಷನ ಮೇಲೆ ದೂರು ದಾಖಲು

ಬಸ್ಸಾಪುರ ಗ್ರಾ.ಪಂ ಅಧ್ಯಕ್ಷ ಭೀಮಶಿ ಅಪ್ಪಯ್ಯ ಕಳ್ಳಿಮನಿ ಅಪ್ರಾಪ್ತೆಯನ್ನು ವಿವಾಹವಾದ ಆರೋಪಿ. ಈತನ ಮೇಲೆ ಶನಿವಾರ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಗ್ರಾ.ಪಂ ಅಧ್ಯಕ್ಷನೊರ್ವ ಅಪ್ರಾಪ್ತೆಯನ್ನು ವಿವಾಹವಾದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ  ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ

ಬಾಲಕಿಯ ಶಾಲಾ ವರ್ಗಾವಣೆ ಪ್ರಮಾಣ ಪತ್ರದ ಜತೆಗೆ ಹೊಸ ಜನನ ಪ್ರಮಾಣ ಪತ್ರದ ದಾಖಲೆಯನ್ನು ಅಧಿಕಾರಿಗಳು ಹೋಲಿಕೆ ಮಾಡಿದ್ದು, ಭೀಮಶಿ ಕಾಲಿಮಣಿ ಬಾಲ್ಯ ವಿವಾಹ ಆಗಿರುವುದು ದೃಢವಾಗಿದೆ.

೨೦೨೩ ನ.೫ ರಂದು ಅಪ್ರಾಪ್ತೆ ಜತೆಗೆ ಭೀಮಶಿ ಕಳ್ಳಿಮನಿ ವಿವಾಹವಾಗಿದ್ದನು.ಈ ಕುರಿತು ದೂರು ಕೇಳಿ ಬಂದ ನಂತರ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಡಾ.ಪ್ರವೀಣ ನೇತೃತ್ವದ ತಂಡ ಬಸ್ಸಾಪುರ ಗ್ರಾಮಕ್ಕೆ ೪ ಬಾರಿ ಭೇಟಿ ನೀಡಿದ್ದರು, ಬಾಲಕಿಯನ್ನು ಪತ್ತೆ ಹಚ್ಚಲು ವಿಫಲವಾಗಿತ್ತು. ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಆರೋಪಿ ಭೀಮಶಿ ತನ ಪತ್ನಿ ಅಪ್ರಾಪ್ತಳಲ್ಲ  ಎಂಬ ನಕಲಿ ದಾಖಲೆ ಬಿಡುಗಡೆ ಮಾಡಿದ್ದನು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ

ಲಕ್ಷ್ಮೀ ಹೆಬ್ಬಾಳ್ಳಕರ,ಸಚಿವೆ

ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾ.ಪಂ ಅಧ್ಯಕ್ಷ ಅಪ್ರಾಪ್ತೆಯನ್ನು ವಿವಾಹವಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಮೂಲಕ ಈಗಾಗಲ್ಲೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಾನೂನು ಕ್ರಮ ಮುಂದುವರೆಸಲಾಗಿದೆ.

ಕೋಟ್-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net