ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಪರಿಚಯಸ್ಥ ಅಪ್ರಾಪ್ತೆ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನಗರದ ಹೊರವಲಯದ ಬೈಪಾಸ್ ಹತ್ತಿರ ಬುಧವಾರ ನಡೆದಿದೆ.

ಶೆರೆವಾಡ ಗ್ರಾಮದ ದೇವರಾಜ, ಫಕ್ಕಿರೇಶ, ಶಿವರಾಜ ಭಜಂತ್ರಿ, ಹನಮಂತಗೌಡ ಉಮಚಗಿ ಎಂಬುವರನ್ನು ಗೋಕುಲ ರೋಡ್ ಪೊಲೀಸರು ಬಂಧಿಸಿದ್ದು, ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ.

ಬಾಲಕಿಗೆ ಸಾಗರ ಎಂಬುವನ ಮುಖಾಂತರ ದೇವರಾಜ ಪರಿಚಯವಾಗಿದ್ದ. ಇಬ್ಬರ ನಡುವೆ ಸ್ನೇಹವಾಗಿ ನಿತ್ಯ ದೂರವಾಣಿ ಮೂಲಕ ಮಾತನಾಡುತ್ತಿದ್ದರು. ದೇವರಾಜ ಬಾಲಕಿಗೆ ಬುಧವಾರ ಮೊಬೈಲ್ ಕೊಡಿಸುತ್ತೇನೆ ಎಂದು ನಗರಕ್ಕೆ ಕರಿಸಿಕೊಂಡಿದ್ದಾನೆ. ಅವಳು ಹುಬ್ಬಳ್ಳಿಗೆ ಬಂದ ಮೇಲೆ ಮೊಬೈಲ್ ಕೊಡಿಸುವ ನೆಪದಲ್ಲಿ ಹರ್ಷ ಕಾಂಪ್ಲೆಕ್ಸ್ ಹಾಗೂ ನೆಹರು ಮೈದಾನದ ಹತ್ತಿರ ಕರೆದುಕೊಂಡು ಓಡಾಡಿದ್ದಾನೆ. ಬಳಿಕ ಅಲ್ಲಿಂದ ಬಂದ ತನ್ನ ಸ್ನೇಹಿತ ಫಕ್ಕಿರೇಶನನ್ನು ಪರಿಚಯ ಮಾಡಿಸಿದ್ದಾನೆ. ಅಲ್ಲಿಂದ ಮೂವರು ಬೈಕ್​ನಲ್ಲಿ ಗೋಕುಲ ರಸ್ತೆಯ ಖಾಸಗಿ ಹೋಟೆಲ್​ಗೆ ಹೋದಾಗ ಬಾಲಕಿ ಹಾಗೂ ದೇವರಾಜ ನಡುವೆ ವೈಮನಸ್ಸಾಗಿದೆ. ಇದರಿಂದ ಕೋಪಗೊಂಡ ದೇವರಾಜ ಹಾಗೂ ಫಕ್ಕಿರೇಶ ಇಬ್ಬರು ಸೇರಿ ಬಾಲಕಿಯನ್ನು ಬಲವಂತವಾಗಿ ನಗರದ ಹೊರವಲಯದ ಬೈಪಾಸ್ ಹತ್ತಿರ ಕರೆದೊಯ್ದು ಆತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರು ಸ್ನೇಹಿತರನ್ನೂ ಕರಿಸಿದ್ದಾರೆ. ಅವರು ಸಹ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಬಾಲಕಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net