

ವಿರಾಜಪೇಟೆ: ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡಬೇಡಿ. ಅವರು ವಾಹನ ಚಲಾಯಿಸಿದರೆ ಪಾಲಕರು ದಂಡ ಹಾಗೂ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ವಿರಾಜ ಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಶಿವರುದ್ರ ಹೇಳಿದರು.
ಕೊಡಗು ಜಿಲ್ಲಾ ಪೊಲೀಸ್ ಇಲಾಖೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಿರಾಜಪೇಟೆ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ ಅಪರಾಧ ತಡೆ ಮುಂಜಾಗ್ರತಾ ಕಾರ್ಯಗಾರದಲ್ಲಿ ಮಾತ ನಾಡಿ, ಇತ್ತೀಚೆಗೆ ವಿರಾಜಪೇಟೆ ಸಮೀಪದ ಅರ್ಜಿ ಗ್ರಾಮದಲ್ಲಿ ಬಾಲಕ ಬೈಕ್ ಚಲಾ ಯಿಸಿ, ಆ ದೃಶ್ಯವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿಕೊಂಡಿದ್ದ. ಅದನ್ನು ಗಮನಿ ಸಿದ ಮಂಗಳೂರು ಪೊಲೀಸ್ ಕಮೀಷ ನರ್, ಕೊಡಗು ಪೊಲೀಸ್ ಇಲಾಖೆಯ ಗಮನಕ್ಕೆ ತಂದಾಗ ಕ್ರಮ ಕೈಗೊಂಡು ಆ ಬಾಲಕನ ಪಾಲಕರಿಗೆ 30 ಸಾವಿರ ರೂ. ದಂಡ ಹಾಕಲಾಯಿತು ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಅಪರಾಧಗಳು ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರ ವಹಿಸಬೇಕು. ಆನ್‌ಲೈನ್‌ಗಳ ಮೂಲಕ ಹಣಕಾಸು ಹಾಗೂ ಇತ್ಯಾದಿ ವಂಚನೆಗಳ ಬಗ್ಗೆ ಎಚ್ಚರ ಇರಲಿ. ಅಪ್ರಾಪ್ತರು ಸಾಮಾ ಜಿಕ ಜಾಲತಾಣದಲ್ಲಿ ಮನಬಂದಂತೆ ಸಂದೇಶಗಳನ್ನು ರವಾನಿಸುತ್ತಿದ್ದು, ಇದರ ಬಗ್ಗೆ ಎಚ್ಚರ ವಹಿಸಬೇಕು. ಅಪ್ರಾಪ್ತ ಹೆಣ್ಣುಮಕ್ಕಳ ವಿಚಾರದಲ್ಲಿ ಪೋಕ್ಸೋ ಕಾಯ್ದೆ ಅನ್ವಯವಾಗುತ್ತಿದ್ದು, ಇದರಿಂದ ಜೀವನ ಕಳೆದುಕೊಳ್ಳಬಾರದು. ಮಾದಕ ವಸ್ತುಗಳಿಂದ ದೂರ ಉಳಿದು ಪಾಲಕರ ಆಶಯದಂತೆ ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ಪ್ರಾಂಶುಪಾಲೆ ತಾತಂಡ ಜ್ಯೋತಿ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ಮಾತನಾಡಿದರು. ವಿರಾಜಪೇಟೆ ನಗರ ಠಾಣಾಧಿಕಾರಿ ಪಿ.ಎ.ಶ್ರೀಧರ್ ಉಪಸ್ಥಿತರಿದ್ದರು.