

ಚಿತ್ರದುರ್ಗ: ನಗರದ ಆಲಿ ಮೊಹಲ್ಲಾದ ವಾಸಿ 12 ವರ್ಷದ ಮೊಹಮ್ಮದ್ ಆವೇಸ್ ಸೋಮವಾರ ಜನರ ಪ್ರಾಣಕ್ಕೆ ಅಪಾಯ ಉಂಟು ಮಾಡುವ ರೀತಿಯಲ್ಲಿ ಅತಿ ವೇಗವಾಗಿ ಸ್ಕೂಟಿ ಚಾಲನೆ ಮಾಡಿದ್ದು, ಸಂಚಾರಿ ಪೊಲೀಸರು ವಾಹನ ವಶಕ್ಕೆ ಪಡೆದಿದ್ದಾರೆ.
ಅಲ್ಲದೆ, ಆವೇಸ್ ಹಾಗೂ ಅಪ್ರಾಪ್ತನಿಗೆ ವಾಹನ ಚಾಲನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಕಾರಣ ಆತನ ತಂದೆ ದಾದಾಪೀರ್ ವಿರುದ್ಧ ಪೊಲೀಸರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ.