

ವಾಡಿ: ಅಪ್ರಾಪ್ತ ವಯಸ್ಸಿನಲ್ಲಿ ಮಕ್ಕಳಿಗೆ ಮದುವೆ ಮಾಡುವುದರಿಂದ ಅವರ ಕನಸುಗಳನ್ನು ಕೊಲ್ಲುವುದರ ಜತೆಗೆ, ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ವಾಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪುಷ್ಪಾ ತಿಳಗೂಳ ಹೇಳಿದರು.
ಕಮರವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನ, ವಿಶ್ವ ಜನಸಂಖ್ಯೆ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 18 ವರ್ಷದೊಳಗಿನ ಯುವತಿಗೆ ಮದುವೆ ಮಾಡಿದರೆ, ಮುಂದೆ ಗರ್ಭಿಣಿಯಾದಾಗ ಮಗು ಮತ್ತು ಆಕೆಯ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಬಾಲ್ಯ ವಿವಾಹ ಬಿಟ್ಟು, ನಿಮ್ಮ ಮಕ್ಕಳ ಆರೋಗ್ಯ ಕಾಪಾಡಿ ಎಂದು ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಬುಳ್ಳಾ ಮಾತನಾಡಿ, ಸಾಂಕ್ರಮಿಕ ರೋಗಗಳ ಬಗ್ಗೆ ಜಾಗೃತಿ ಅಗತ್ಯ. ನಾವಿಂದು ಪೌಷ್ಟಿಕ ಆಹಾರದ ಬಗ್ಗೆ ನಿರ್ಲಕ್ಷÈ ವಹಿಸುತ್ತಿz್ದೆÃವೆ. ಇದರಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿz್ದÉÃವೆ ಎಂದರು.
ಆಪ್ತ ಸಮಾಲೋಚಕ ಬಾಬುರಾವ್ ಭೀಮನಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಸುಧಾರಾಣಿ ದೇಸಾಯಿ, ಆರೋಗ್ಯ ನಿರೀಕ್ಷಣಾಧಿಕಾರಿ ಕಿರಣಕುಮಾರ ಧನವಾಡಕರ್, ಆರೋಗ್ಯಧಿಕಾರಿ ಭವ್ಯ ಸ್ನೇಹಲತಾ, ಸರ್ಕಾರಿ ಶಾಲೆ ಪ್ರಭಾರಿ ಮುಖ್ಯಶಿಕ್ಷಕ ವೀರಣ್ಣ ಪಂಚಾಳ, ಆರೋಗ್ಯ ಅಧಿಕಾರಿ ವಿಶ್ವಾರಾಧ್ಯ ಹಿರೇಮಠ, ಆಶಾ ಮರೆಮ್ಮ ಕೊಟಗಾರ ಇತರರಿದ್ದರು.