

ಬಸವಕಲ್ಯಾಣ: ಅಪ್ರಾಪ್ತ ಮಗಳ ಮೇಲೆ ತಂದೆಯೇ ಅತ್ಯಾಚಾರ ನಡೆಸಿದ ಹೇಯ ಕೃತ್ಯ ಹಳ್ಳಿಯೊಂದರಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ೧೨ ವರ್ಷದ ಮಗಳ ಮೇಲೆ ಮೂರು ವರ್ಷದಿಂದ ನಿರಂತರ ಅತ್ಯಾಚಾರ ನಡೆಸಿರುವ ತಂದೆ, ಯಾರಿಗಾದರೂ ಹೇಳಿದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಸಿದ್ದ ಎನ್ನಲಾಗಿದೆ. ಜು.೨೯ರಂದು ಸಂಜೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕಾಮುಕ ತಂದೆ ಅತ್ಯಾಚಾರ ನಡೆಸಲು ಸಿದ್ಧತೆ ನಡೆಸಿದ್ದ. ಈ ವೇಳೆ ಬಾಲಕಿ ಅಜ್ಜಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಮೇಲ್ವಿಚಾರಕಿ ಡಾ.ಭಾಗಮ್ಮ ಎನ್. ಬಾಲಕಿಯ ವಿಚಾರಣೆ, ಆಪ್ತ ಸಮಾಲೋಚನೆ ನಡೆಸಿ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಅತ್ಯಾಚಾರಿ ತಂದೆಯನ್ನು ಬಂಧಿಸಿದ್ದಾರೆ.