ಅಪ್ಪು ಸ್ಮರಿಸಿ ಭಾವುಕರಾದ ಅಭಿಮಾನಿಗಳು

IMG_6652
Published on

ಮೈಸೂರು: ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದ ಬಳಿ ಅಪ್ಪು ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಬೃಹತ್ ಕಟೌಟ್‌ಗೆ ಹೂವಿಗೆ ಹಾರ ಹಾಕಿ ಜನತೆಗೆ ಅನ್ನಸಂತರ್ಪಣೆ ಮಾಡುವ ಮೂಲಕ ಅಪ್ಪುಗೆ ನಮನ ಸಲ್ಲಿಸಿದರು.

ಪದ್ಮ ಚಿತ್ರಮಂದಿರದಲ್ಲಿ ಗಂಧದಗುಡಿ ಚಿತ್ರ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅಭಿಮಾನಿಗಳು ಅಪ್ಪು ಸ್ಮರಿಸಿ ಭಾವುಕರಾದರು. ಜತೆಗೆ ಬೆಳಗ್ಗೆಯಿಂದ ಸಂಜೆಯವರೆಗೆ ಪುನೀತ್ ರಾಜ್‌ಕುಮಾರ್ ನಟಿಸಿರುವ ಚಿತ್ರಗಳ ಗೀತೆಗಳು ಮೇಳೈಸಿದವು.

ನಗರದ ಪ್ರಮುಖ ವೃತ್ತಗಳಲ್ಲೂ ಅಪ್ಪು ಭಾವಚಿತ್ರಗಳು ರಾರಾಜಿಸಿದವು. ರಾಮಸ್ವಾಮಿವೃತ್ತ, ಅಶೋಕ ವೃತ್ತ ಸೇರಿದಂತೆ ಇನ್ನಿತರ ವೃತ್ತಗಳಲ್ಲಿ ‘ಯುವರತ್ನ’ನ ಭಾವಚಿತ್ರ ಇಟ್ಟು ಪುಷ್ಪ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net