ಅಪ್ಪು ಸ್ಮರಣಾರ್ಥ ಅಭಿಮಾನಿಗಳಿಂದ ಅನ್ನದಾನ

SGR WEB
Published on

ಸಾಗರ: ಪುನೀತ್ ರಾಜಕುಮಾರ್ ದೇವರಿದ್ದಂತೆ. ಅವರ ಸಾಮಾಜಿಕ ಕೆಲಸವನ್ನು ಸದಾ ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮಂತಹ ಬೀದಿಬದಿ ವ್ಯಾಪಾರಿಗಳು ಸದಾ ಪ್ರಯತ್ನ ನಡೆಸುತ್ತೇವೆ. ಅವರು ಸದಾ ನಮ್ಮೊಂದಿಗಿದ್ದಾರೆ ಎಂದು ಪವರ್ ಸ್ಟಾರ್ ಅಪ್ಪು ಫಾಸ್ಟ್‌ಫುಡ್ ಸೆಂಟರ್ ಮಾಲೀಕ ಲಿಂಗಪ್ಪ ಹೇಳಿದರು.

ನಗರದ ಬಿ.ಎಚ್.ರಸ್ತೆಯಲ್ಲಿ ಶನಿವಾರ ಅಪ್ಪು ನಿಧನದ ಒಂದು ವರ್ಷದ ನೆನಪಿನಾರ್ಥ ಹಮ್ಮಿಕೊಂಡಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಅಪ್ಪುವನ್ನು ನಾವೆಲ್ಲ ತುಂಬ ಆರಾಧಿಸಿಕೊಂಡು ಬಂದಿದ್ದೇವೆ. ಇವತ್ತಿಗೂ ನಮಗೆ ಪುನೀತ್ ಇಲ್ಲ ಎನಿಸುತ್ತಿಲ್ಲ. ಪುನೀತ್ ಮಾಡಿರುವ ಸಾಮಾಜಿಕ ಕೆಲಸ ನಮಗೆಲ್ಲ ಸ್ಫೂರ್ತಿಯಾಗಿದ್ದು ಅವರ ಪುಣ್ಯಸ್ಮರಣೆ ಅಂಗವಾಗಿ ಒಂದು ಸಾವಿರ ಜನರಿಗೆ ಲಘು ಭೋಜನವನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.

ಅಪ್ಪು ಅಭಿಮಾನಿ ಗಿರೀಶ್ ಕೋವಿ ಮಾತನಾಡಿ, ಪುನೀತ್ ರಾಜ್‌ಕುಮಾರ್ ಓರ್ವ ದೇವತಾ ಮನುಷ್ಯ. ತಮ್ಮ ಸಣ್ಣ ವಯಸ್ಸಿನಲ್ಲಿಯೆ ಅವರು ಮಾಡಿದ ಸಾಧನೆ ಯುವಪೀಳಿಗೆಗೆ ಸ್ಫೂರ್ತಿ ತರುವಂತದ್ದು. ಅವರ ಒಂದು ವರ್ಷದ ಪುಣ್ಯ ಸ್ಮರಣೆಯನ್ನು ಲಿಂಗಪ್ಪ ಮತ್ತು ಸಪ್ತಗಿರಿ ನಾಗರಾಜ್ ಅವರು ಸಾಮಾಜಿಕ ಕಾರ್ಯದ ಮೂಲಕ ನಡೆಸುತ್ತಿರುವುದು ಇತರರಿಗೆ ಪ್ರೇರಣೆಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net