ಅಪ್ಪನನ್ನೇ ಸಾಯಿಸಿದ ಮಗ!

Published on

ಸ್ನೇಹಿತರೊಂದಿಗೆ ಸೇರಿಕೊಂಡು ಕೃತ್ಯ, ಸಿಸಿ ಕ್ಯಾಮರಾದಲ್ಲಿ ಸೆರೆ, 8 ಆರೋಪಿಗಳ ಬಂಧನ

ಕುಣಿಗಲ್​: ಶಿವಾಜಿ ಟೆಂಟ್​ ರಸ್ತೆಯ ಐಸ್​ಕ್ರೀಮ್​ ಫ್ಯಾಕ್ಟರಿ ಮಾಲೀಕ ನಾಗೇಶ್​(55) ಸಾವಿನ ಪ್ರಕರಣಕ್ಕೆ ಬಿಗ್​ಟ್ವಿಸ್ಟ್​ ಸಿಕ್ಕಿದ್ದು, ಆತನ ಮಗನೇ ಸ್ನೇಹಿತರೊಂದಿಗೆ ಸೇರಿಕೊಂಡು ಕೊಲೆ ಮಾಡಿರುವ ಬಗ್ಗೆ ಪ್ರಮುಖ ಸಾಕ್ಷ$್ಯ ಸಂಗ್ರಹಿಸಿರುವ ಪೊಲೀಸರು, 8 ಆರೋಪಿಗಳನ್ನು ಬಂಧಿಸಿದ್ದಾರೆ.

ಮೇ 11ರಂದು ಕುಣಿಗಲ್​ ಠಾಣೆಯಲ್ಲಿ ದಾಖಲಾಗಿದ್ದ ನಾಗೇಶ್​ ಅಸಹಜ ಸಾವು ಪ್ರಕರಣದ ಪ್ರಾಥಮಿಕ ತನಿಖೆ ಹಂತದಲ್ಲಿ ಕೊಲೆ ಎಂಬುದನ್ನು ಪತ್ತೆ ಮಾಡಿದೆ. ಟನೆ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಮೇ 10ರಂದು ರಾತ್ರಿ 10ರ ಸಮಯದಲ್ಲಿ ಕೊಲೆ ಮಾಡಿರುವ ದೃಶ್ಯ ಸೆರೆಯಾಗಿದ್ದು, ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ನಾಗೇಶ್​ ಮಗ ಸೂರ್ಯ(19) ಹಾಗೂ ಆತನ ಸ್ನೇಹಿತ ತಿಮ್ಮಸಂದ್ರದ ಸಂಜಯ್​(23) ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು, ಕೊಲೆ ಸಂಚು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಒಟ್ಟು 8 ಜನರನ್ನು ಬೆಂಗಳೂರಿನಿಂದಬಂಧಿಸಿ ಕರೆತರಲಾಗಿದೆ.

ಮಗಳ ಪ್ರೀತಿ ವಿರೋಧಿಸಿದ್ದ ನಾಗೇಶ್​ ವಿರುದ್ಧ ಆತನ ಮಗ ಸೂರ್ಯ ಹಾಗೂ ಸ್ನೇಹಿತ ಸಂಜಯ ದ್ವೇಷ ಬೆಳಸಿಕೊಂಡು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ತುಮಕೂರು ತಾಲೂಕು ತಿಮ್ಮಸಂದ್ರದ ನಾಗೇಶ್​ ತನ್ನ ಮೊದಲನೇ ಪತ್ನಿಯಿಂದ ವಿವಾಹ ವಿಚ್ಛೇದನ ಪಡೆದು ಮತ್ತೊಂದು ಮದುವೆಯಾಗಿದ್ದರು. ಅವರಿಗೆ ಮಗ ಹಾಗೂ ಅಪ್ರಾಪ್ತ ವಯಸ್ಸಿನ ಒಬ್ಬಳು ಮಗಳು ಇದ್ದಾಳೆ.ಸಹೋದರಿನ ಪ್ರೀತಿಗೆ ಅಡ್ಡಿಪಡಿಸಿದ ತಂದೆ ನಾಗೇಶನನ್ನು ಮುಗಿಸಲು ಸೂರ್ಯ ಮತ್ತು ಸಂಜಯ್​ ಸಂಚು ರೂಪಿಸಿದ್ದು, ಅಪಘಾತ ಮಾಡಲು ನಡೆಸಿದ್ದ ಸಂಚು ಇತ್ತೀಚೆಗೆ

ವಿಲವಾಗಿತ್ತು ಎನ್ನಲಾಗಿದೆ. ಆದರೆ, ಮೇ 11ರಂದು ಐಸ್​ಕ್ರೀಮ್​ ಕಾರ್ಖಾನೆಯಲ್ಲಿ ನಾಗೇಶ್​ ಒಬ್ಬರೇ ಇರುವುದನ್ನು ಗಮನಿಸಿದ ಸೂರ್ಯ ಮತ್ತು ಸಂಜಯ್​, ಕಬ್ಬಿಣದ ರಾಡಿನಿಂದ ನಾಗೇಶ್​ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ.

ಮೃತದೇಹಕ್ಕೆ ಕರೆಂಟ್​ ಶಾಕ್​!: ಕೊಲೆ ಮರೆ ಮಾಚಲು ಯತ್ನಿಸಿದ್ದ ಆರೋಪಿಗಳು ನಾಗೇಶ್​ ಶವವನ್ನು ಹಾಸಿಗೆ ಮೇಲೆ ಮಲಗಿಸಿ ಶವದ ಕೆಗೆ ಕರೆಂಟ್​ ಶಾಕ್​ ಕೊಟ್ಟು ಅಲ್ಲಿಂದ ಪರಾರಿಯಾಗಿದ್ದರು. ಕರೆಂಟ್​ ಶಾಕ್​ನಿಂದ ನಾಗೇಶ್​ ಮೃತಪಟ್ಟಿರುವುದಾಗಿ ಬಿಂಬಿಸಿದ್ದರು. ಆದರೆ, ಸಾವಿನ ಬಗ್ಗೆ ಅನುಮಾನಗೊಂಡ ನಾಗೇಶ್​ ಸಹೋದರಿ ಸುನೀತಾ ಕುಣಿಗಲ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ಬಯಲಾಗಲು ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net