ಅಪ್ಪನ ಕೆರೆ ರಸ್ತೆ ದುರಸ್ತಿ ಮಾಡಿ

1503Klb07
Published on

ಕಲಬುರಗಿ: ಸಂಪೂರ್ಣ ಹದಗೆಟ್ಟಿರುವ ಟ್ಯಾಂಕ್ ಬಂಡ್ ರಸ್ತೆ ದುರಸ್ತಿ ಮತ್ತು ಪ್ಲಾಸ್ಟಿಕ್ ನಿಷೇಧಿಸಲು ಒತ್ತಾಯಿಸಿ ಮಹಾನಗರ ಪಾಲಿಕೆ ಕಚೇರಿ ಎದುರು ಜೈ ಕರ್ನಾ ಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಅಪ್ಪಾ ಪಬ್ಲಿಕ್ ಶಾಲೆ ಎದುರಿನ ಕೆರೆ ರಸ್ತೆ ಕೆಲ ತಿಂಗಳಿಂದ ತೀವ್ರ ಹದಗೆಟ್ಟಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಕುರಿತು ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಇದೇ ರಸ್ತೆಯಲ್ಲಿ ಅಪ್ಪ ಪಬ್ಲಿಕ್ ಗಾರ್ಡನ್ ಸಹ ಇದೆ. ಕೆಟ್ಟು ಹೋಗಿರುವ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ಪ್ರತಿದಿನ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಆದರೂ ದುರಸ್ತಿ ಮಾಡಲು ಪಾಲಿಕೆ, ಜಿಲ್ಲಾಡಳಿತ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಪ್ಲಾಸ್ಟಿಕ್ ಹಾಗೂ ನಾನ್ ಓವನ್ ಚೀಲ ಬಳಕೆ ನಿಷೇಧಿಸುವಂತೆ ಆಗ್ರಹಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net