ಅಪ್ಪಚ್ಚು ರಂಜನ್ ಪರ ಪುತ್ರ ಉಜ್ವಲ್ ಕಾರ್ಯಪ್ಪ ಪ್ರಚಾರ

04Kush01
Published on

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಪ್ರವಾಹ, ಗುಡ್ಡ ಕುಸಿತ ಉಂಟಾದ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರೊಂದಿಗಿದ್ದು ಅವರಿಗೆ ಅವಶ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿರುವ ಶಾಸಕರೊಂದಿಗೆ ಕ್ಷೇತ್ರದ ಮತದಾರರು ಇರುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಪುತ್ರ ಉಜ್ವಲ್ ಕಾರ್ಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.


ಕುಶಾಲನಗರದ ಐಬಿ ರಸ್ತೆಯಲ್ಲಿ ಗುರುವಾರ ಅಪ್ಪಚ್ಚು ರಂಜನ್ ಪರ ಬಿರುಸಿನ ಪ್ರಚಾರ ಮಾಡುವಾಗ ವಿಜಯವಾಣಿಯೊಂದಿಗೆ ಮಾತನಾಡಿ, ಈಗಾಗಲೇ ಸಾಕಷ್ಟು ಊರುಗಳಲ್ಲಿ ಪ್ರಚಾರ ಮಾಡಿದ್ದೇನೆ. ಅಪ್ಪನ ಪರವಾದ ವಾತಾವರಣವಿದೆ. ಖಂಡಿತ ಅವರು ಗೆಲ್ಲುತ್ತಾರೆ ಎಂದರು.
ಸೋಮವಾರಪೇಟೆ ಮಂಡಲ ವಕ್ತಾರ ಕೆ.ಜಿ.ಮನು, ಕೂಡುಮಂಗಳೂರು ಗ್ರಾಪಂ ಸದಸ್ಯ ಭಾಸ್ಕರ್ ನಾಯಕ್, ಶಿವಾಜಿ, ಗೀತಾ ಬಸಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net