ಅಪ್ಘನ್ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಪೊಲೀಸ್ ಕಮಿಷನರ್

IMG-20210821-WA0020
Published on

ಮಂಗಳೂರು: ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಫ್ಘಾನಿಸ್ತಾನದ ವಿದ್ಯಾರ್ಥಿಗಳಿಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಧೈರ್ಯ ತುಂಬಿದ್ದಾರೆ.

ಶನಿವಾರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ 58. ವಿದ್ಯಾರ್ಥಿಗಳ ಜತೆ ಸಭೆ ನಡೆಸಿದರು. ಈ ಸಂದರ್ಭ ನಮಗೆ ಸೂಕ್ತ ಸುರಕ್ಷತೆ ಕ್ರಮ ಮಾಡುವಂತೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸ್ಪಂದನೆ ನೀಡಿದರು.

ಮಂಗಳೂರಿನವರು ಯಾರಾದರೂ ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದರೆ ಅವರ ಮಾಹಿತಿ ನೀಡಬಹುದು. ಹಾಗೆಯೇ ಅಲ್ಲಿನವರು ಯಾವುದೇ ಸಮಸ್ಯೆ ಉಂಟಾದರೆ ನಮ್ಮ ಗಮನಕ್ಕೆ ತರಬಹುದು. ಅವರು ಆತಂಕ ಪಡುವ ಅಗತ್ಯ ಇಲ್ಲ ಎಂದು ಶಶಿಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net