ಅಪೌಷ್ಟಿಕತೆ ತಡೆಗೆ ಪೋಷಣ್ ಅಭಿಯಾನ

20 hbd 01
Published on

ಚಿಟಗುಪ್ಪ: ಅಪೌಷ್ಟಿಕತೆ ಮತ್ತು ರಕ್ತಹಿನತೆ ತಡೆಗಟ್ಟಲು ಸೆಪ್ಟೆಂಬರ್‌ನ್ನು ಪೋಷಣ್ ಅಭಿಯಾನ ತಿಂಗಳನ್ನಾಗಿ ಆಚರಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಮೇಲ್ವಿಚಾರಕಿ ಶಿಲ್ಪಾ ಮರಾಟೆ ಹೇಳಿದರು.
ಮೀನಕೇರಾ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ರಾಷ್ಟಿçÃಯ ಪೋಷಣ್ ಅಭಿಯಾನ-ಅಪೌಷ್ಟಿಕತೆ ಮುಕ್ತ ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯ ಇಲಾಖೆಯ ಸುಮಂಗಲಾ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ಉದ್ಘಾಟಿಸಿದರು. ಗರ್ಭಿಣಿಯರಿಗೆ ಅರಿಶಿನ, ಕುಂಕುಮ, ಫಲಧಾನ್ಯಗಳೊಂದಿಗೆ ಸೀಮಂತ ನೆರವೇರಿಸಲಾಯಿತು. ಹಸುಗೂಸುಗಳಿಗೆ ಅನ್ನಪ್ರಾಶನ ಹಾಗೂ ಪೌಷ್ಟಿಕ ಆಹಾರಗಳ ಪ್ರದರ್ಶನ ನಡೆಯಿತು.
ಗ್ರಾಪಂ ಪಿಡಿಒ ಬಸವರಾಜ, ಉಪಾಧ್ಯಕ್ಷೆ ಶ್ರೀದೇವಿ ಪ್ರೇಮನಾಥ, ಸದಸ್ಯ ನಾಗಪ್ಪ ಅರ್ಕಿ, ಶಿಲ್ಪಾ, ಜೀವನ, ಸಂತೋಷ ಥೊಂಟಿ, ಸುವರ್ಣ, ಮೋಸಿನ್ ಜನವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net