ಅಪಾರ ಬೆಂಬಲಿಗರೊಂದಿಗೆ ಹರ್ಷವರ್ಧನ್ ನಾಮಪತ್ರ ಸಲ್ಲಿಕೆ

default
default
Published on

ನಂಜನಗೂಡು: ನಂಜನಗೂಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಬಿ.ಹರ್ಷವರ್ಧನ್ ಮಂಗಳವಾರ ಅಸಂಖ್ಯಾತ ಕಾರ್ಯಕರ್ತರ ಬೆಂಬಲದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.

ನಗರದ ಪ್ರಸನ್ನ ಚಿಂತಾಮಣಿ ಗಣಪತಿ ದೇವಾಲಯದ ಮುಂದೆ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶಗೊಂಡಿದ್ದರು. ಶಾಸಕ ಬಿ.ಹರ್ಷವರ್ಧನ್ ಗಣಪತಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ವಿದ್ಯಾವರ್ಧಕ ಮೈದಾನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕರ್ತರ ಉತ್ಸಾಹ, ಜೈಕಾರವನ್ನು ಕಂಡ ಸಂಸದ ವಿ.ಶ್ರೀನಿವಾಸಪ್ರಸಾದ್ ಈ ಬಾರಿ ನಂಜನಗೂಡಿನಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ನಂತರ ಜನಸಾಗರದಂತೆ ಸೇರಿದಂತೆ ಕಾರ್ಯಕರ್ತರೊಂದಿಗೆ ಮೈಸೂರು-ಗುಂಡ್ಲುಪೇಟೆ ಹೆದ್ದಾರಿಯಲ್ಲಿ ಕಾಲ್ನಡಿಗೆಯಲ್ಲೇ ಮಿನಿವಿಧಾನಸೌಧದವರೆಗೂ ಶಾಸಕ ಬಿ.ಹರ್ಷವರ್ಧನ್ ಹೆಜ್ಜೆ ಹಾಕಿದರು. ಈ ವೇಳೆ ಕಾರ್ಯಕರ್ತರು ಬಿಜೆಪಿ ಬಾವುಟಗಳನ್ನು ಪ್ರದರ್ಶಿಸುತ್ತಾ ಮಾರ್ಗದುದ್ದಕ್ಕೂ ಪಟಾಕಿ ಸಿಡಿಸಿ ಇನ್ನೈದು ವರ್ಷ ನಂಜನಗೂಡಿಗೆ ಹರ್ಷ ಎಂಬ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಪಟ್ಟರು.

ಬಿಜೆಪಿ ಮಂಡಲ ಅಧ್ಯಕ್ಷ ಹೊರಳವಾಡಿ ಪಿ.ಮಹೇಶ್, ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಹಿರಿಯ ಮುಖಂಡರಾದ ಕುಂಬ್ರಹಳ್ಳಿ ಸುಬ್ಬಣ್ಣ, ಬಾಲಚಂದ್ರು ಅವರೊಂದಿಗೆ ತೆರಳಿದ ಶಾಸಕ ಬಿ.ಹರ್ಷವರ್ಧನ್ ಚುನಾವಣಾಧಿಕಾರಿ ಕೃಷ್ಣಮೂರ್ತಿ ಅವರ ಬಳಿ ನಾಮಪತ್ರ ಸಲ್ಲಿಸಿದರು.

ನಗರಸಭಾಧ್ಯಕ್ಷ ಮಹದೇವಸ್ವಾಮಿ, ಜಿಪಂ ಮಾಜಿ ಸದಸ್ಯರಾದ ಸಿಂಧುವಳ್ಳಿ ಕೆಂಪಣ್ಣ, ಸಿ.ಚಿಕ್ಕರಂಗನಾಯ್ಕ, ಮುಖಂಡ ಜಯದೇವ್, ಬಿಜೆಪಿ ಗ್ರಾಮಾಂತರ ಮಹಿಳಾ ಘಟಕದ ಅಧ್ಯಕ್ಷೆ ಕೋಮಲ ಮಹಾಲಿಂಗಸ್ವಾಮಿ, ನಗರಾಧ್ಯಕ್ಷೆ ನಂದಿನಿ ಮಹೇಶ್, ಮಂಡ್ಯ ಮಹದೇವು, ಹುಲ್ಲಹಳ್ಳಿ ಸಣ್ಣಯ್ಯ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net