ಅಪಾರ ಪ್ರಮಾಣದ ಶುಂಠಿ ಕಳ್ಳತನ

23arsph3ep
ನರಸೀಪುರ ಗ್ರಾಮದಲ್ಲಿ ಜಮೀನಿನಲ್ಲಿ ಬೆಳೆಯಲಾಗಿದ್ದ ಅಪಾರ ಪ್ರಮಾಣದ ಶುಂಠಿಯನ್ನು ಕಳ್ಳತನ ಮಾಡಿರುವುದು.
Published on

ಅರಸೀಕೆರೆ: ತಾಲೂಕಿನ ಜಾವಗಲ್ ಹೋಬಳಿ ನರಸೀಪುರ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಜಮೀನಿನಲ್ಲಿ ಬೆಳೆಯಲಾಗಿದ್ದ ಅಪಾರ ಪ್ರಮಾಣದ ಶುಂಠಿಯನ್ನು ಕಳ್ಳತನ ಮಾಡಲಾಗಿದೆ.

ಕೃಷಿಕ ಶಿವಾನಂದ್ ಶುಂಠಿ ಬೆಳೆ ಕಳೆದುಕೊಂಡ ಬೆಳೆಗಾರ.ಸಮೃದ್ಧವಾಗಿ ಬೆಳದಿದ್ದ ಬೆಳೆ ಅಲ್ಲಲ್ಲಿ ಕಿತ್ತು ಹೋಗಿರುವುದನ್ನು ಬುಧವಾರ ಬೆಳಗ್ಗೆ ಗಮನಿಸಿದ ವೇಳೆ ಕಳವು ಮಾಡಿರುವುದು ಗೊತ್ತಾಗಿದೆ.ಮಾರುಟ್ಟೆಯಲ್ಲಿ ಧಾರಣೆ ಹೆಚ್ಚಿರುವುದನ್ನು ಮನಗಂಡಿರುವ ಖದೀಮರ ತಂಡ ಕೃತ್ಯವೆಸಗಿದ್ದು 35ಕ್ಕೂ ಹೆಚ್ಚಿನ ಚೀಲದಷ್ಟು ಕದ್ದೊಯ್ದಿದ್ದಾರೆ. ಸಾಲಾ ಮಡಿ ಬೆಳೆ ಬೆಳೆದಿದ್ದ ರೈತನಿಗೆ ಭಾರಿ ನಷ್ಟವಾಗಿದ್ದು ಕಳ್ಳರನ್ನು ಪತ್ತೆ ಹಚ್ಚುವ ಜತೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಪಂ ಸದಸ್ಯ ಅರವಿಂದ ತಾಲೂಕು ಅಡಳಿತವನ್ನು ಒತ್ತಾಯಿಸಿದ್ದಾರೆ.ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net