ಅಪಾರ ಜ್ಞಾನ ಹೊಂದಬೇಕು

15 bgk-3
Published on

ಬಾಗಲಕೋಟೆ: ಖನಿಜ ಮತ್ತು ಅದಿರುಗಳ ಬಗ್ಗೆ ಅಪಾರ ಜ್ಞಾನ ಹೊಂದಬೇಕು ಎಂದು ಬಿವಿವಿ ಸಂಘದ ಆಯುರ್ವೇದಿಕ ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷÀ ಮಲ್ಲಿಕಾರ್ಜುನ ಸಾಸನೂರ ಹೇಳಿದರು.

ನಗರದ ಬಿವಿವಿ ಸಂಘದ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ರಸಶಾಸ್ತç ಹಾಗೂ ಭೈಷಜ್ಯ ಕಲ್ಪನಾ ವಿಭಾಗದಿಂದ ಹಮ್ಮಿಕೊಂಡಿದ್ದ ಕ್ಷಿತಿಜ-೨.೦ ಸೇತುಬಂಧ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಲಿಕೆಗೆ ಹೆಚ್ಚು ಒತ್ತು ನೀಡಿದರೇ ಭವಿಷ್ಯದಲ್ಲಿ ಅದು ಬಹಳಷ್ಟು ಉಪಯೋಗಕ್ಕೆ ಬರಲಿದೆ ಎಂದರು.

ಮಹಾವಿದ್ಯಾಲಯದ ಪ್ರಭಾರ ಪ್ರಾಚಾರ್ಯ ಡಾ.ಎಂ. ಎಸ್. ಹಿರೇಮಠ ಮಾತನಾಡಿ, ಸೇತುಬಂಧ ಕಾರ್ಯಾಗಾರದ ಪ್ರಾಮುಖ್ಯತೆ ಹಾಗೂ ಅವುಗಳಿಂದಾಗುವ ಉಪಯೋಗ ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಡಾ.ಪ್ರಮೋದ ಹನಮಗೊಂಡ, ಡಾ.ಸೂರಜ ಮೆನಸೆ, ಪ್ರೀಯಾಂಕ ಶಿಂಧೆ, ಡಾ.ಸಿ.ಆರ್.ಹೊನವಾಡ, ಡಾ.ಆರ್.ಐ.ಜಂಬಗಿ, ಡಾ.ವಿ.ಎಸ್.ಚೌಧರಿ, ಡಾ.ವಿ.ಎಸ್.ಹಿರೇಮಠ, ಡಾ.ಜಿ.ಎಸ್.ಕುಲಕರ್ಣಿ ಉಪಸ್ಥಿತರಿದ್ದರು. ಡಾ.ವೀಣಾ ನಂದೆನ್ನವರ ಸ್ವಾಗತಿಸಿದರು, ಡಾ.ಪವಿತ್ರಾ ಜಿ ವಂದಿಸಿದರು. ಡಾ.ಚೈತ್ರಾ ಎನ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net