

ಚಾಮರಾಜನಗರ : ಅಂಗನವಾಡಿ ಕಟ್ಟಡಗಳ ಮೇಲೆ ಜೋತು ಬಿದ್ದಿರುವ ವಿದ್ಯುತ್ ತಂತಿಗಳು, ರಸ್ತೆಯ ಸಮೀಪ ಭಾಗಿಕೊಂಡಿರುವ ಟ್ರಾನ್‌ಸ್ಾರ್ಮರ್ ಅನ್ನು ತೆರವುಗೊಳಿಸಿ, ಆತಂಕವನ್ನು ದೂರಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲೂಕಿನ ನಾಗವಳ್ಳಿ ಗ್ರಾಮದ ಪರಿಶಿಷ್ಟ ಸಮುದಾಯದವರು ವಾಸ ಮಾಡುವ 4 ಮತ್ತು 5 ನೇ ವಾರ್ಡಿನ ಮುಖ್ಯರಸ್ತೆಯಲ್ಲಿರುವ ಟ್ರಾನ್‌ಸ್ಾರ್ಮರ್ ಇತ್ತೀಚೆಗ ಸುರಿದ ನಿರಂತರ ಮಳೆಯಿಂದಾಗಿ ಭಾಗಿಕೊಂಡಿದೆ. ಪರಿಣಾಮವಾಗಿ ರಸ್ತೆಯ ಸಮೀಪದಲ್ಲೇ ಹಾದುಹೋಗಿರುವ ವಿದ್ಯುತ್ ತಂತಿಗಳು ಕೂಡ ಜೋತು ಬಿದ್ದಿದ್ದು, ಯಾವುದೇ ಕ್ಷಣದಲ್ಲಾದರೂ ವಿದ್ಯುತ್ ಅವಘಡ ಸಂಭವಿಸಬಹುದಾದ ಸ್ಥಿತಿಯಲ್ಲಿದೆ. ಇನ್ನು ರಸ್ತೆಯ ಬದಿಯಲ್ಲೇ ಇರುವ ಟ್ರಾನ್‌ಸ್ಾರ್ಮರ್‌ಗೆ ಬಳ್ಳಿ ಹಬ್ಬಿಕೊಂಡಿದ್ದು, ಸುತ್ತಮುತ್ತಲೂ ಅವ್ಯವಸ್ಥೆ ತಾಂಡವವಾಡುತ್ತಿದೆ. ಟ್ರಾನ್‌ಸ್ಾರ್ಮರ್ ಇರುವ ಸ್ಥಳ ತಿರುವಿನಿಂದ ಕೂಡಿದ್ದು, ವಾಹನ ಚಾಲಕರು ಸಂಚಾರ ಮಾಡಲು ಕೂಡ ಸಮಸ್ಯೆ ಉಂಟಾಗುತ್ತಿದೆ.
ಈ ರಸ್ತೆಯಲ್ಲಿ ಮಹಿಳಾ ಸಮುದಾಯ ಭವನ, ಅಂಗನವಾಡಿ ಕೇಂದ್ರಗಳು, ಶುದ್ಧ ಕುಡಿಯುವ ನೀರಿನ ಘಟಕ, ಆಸ್ಪತ್ರೆ ಹಾಗೂ ಶಾಲೆಯೂ ಇರುವುದರಿಂದ ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಿತ್ಯವೂ ಸಂಚಾರ ಮಾಡುತ್ತಾರೆ. ಇನ್ನು ಟ್ರಾನ್‌ಸ್ಾರ್ಮರ್‌ನಿಂದ ಹಾದುಹೋಗಿರುವ ವಿದ್ಯುತ್ ತಂತಿಗಳು ಜೋತುಬಿದ್ದಿದ್ದು, ಪಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಯಾವುದೇ ಅನಾಹುತ ಸಂಭವಿಸುವ ಮುನ್ನಾ, ಅಪಾಯದ ಸ್ಥಿತಿಯಲ್ಲಿರುವ ಟ್ರಾನ್‌ಸ್ಾರ್ಮರ್ ಅನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಆಗಾಗ ಗ್ರೌಂಡಿಂಗ್:
ಸುಮಾರು 100 ಕೆವಿಎ ಟ್ರಾನ್‌ಸ್ಾರ್ಮರ್ ರಸ್ತೆ ಬದಿಯಲ್ಲಿ ಭಾಗಿಕೊಂಡಿರುವುದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿದೆ. ಟ್ರಾನ್‌ಸ್ಾರ್ಮರ್ ಸುತ್ತಲೂ ಗಿಡ-ಬಳ್ಳಿ ಹಬ್ಬಿಕೊಂಡಿರುವುದರಿಂದ ಮಳೆಯಾದಾಗ ಗ್ರೌಂಡಿಂಗ್ ಆಗುತ್ತಿದೆ. ಈ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಜನರು ಆತಂಕ ಪಡುತ್ತಿದ್ದಾರೆ. ಸಮೀಪದಲ್ಲೇ ಹಲವಾರು ವಾಸದ ಮನೆಗಳು ಇರುವುದರಿಂದ ಇದನ್ನು ಸ್ಥಳಾಂತರ ಮಾಡಬೇಕು ಎಂದು ಹಲವಾರು ಕುಟುಂಬಗಳು ಒತ್ತಾಯ ಮಾಡುತ್ತಿದ್ದಾರೆ. ಟ್ರಾನ್‌ಸ್ಾರ್ಮರ್ ತಿರುವಿನಲ್ಲಿ ಇರುವುದರಿಂದ ಎರಡು ಬದಿಯ ರಸ್ತೆಯಲ್ಲೂ ವಿದ್ಯುತ್ ತಂತಿಗಳು ಜೋತು ಬಿದ್ದಿದೆ. ಆಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಅವಘಡ ಸಂಭವಿಸುವ ಮುನ್ನಾ ವಿದ್ಯುತ್ ಇಲಾಖೆಯವರು ಎಚ್ಚೆತ್ತುಕೊಂಡು ಟ್ರಾನ್‌ಸ್ಾರ್ಮರ್ ಅನ್ನು ಕೂಡಲೇ ಸ್ಥಳಾಂತರ ಮಾಡಬೇಕು ಹಾಗೂ ವಿದ್ಯುತ್ ನೀಡಲು ಪರ್ಯಾಯ ಮಾರ್ಗವನ್ನು ತೋರಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಟ್ಟಡಗಳ ಮೇಲೆ ವಿದ್ಯುತ್ ತಂತಿ:
ನಾಗವಳ್ಳಿ ಗ್ರಾಮದಲ್ಲಿ ಟ್ರಾನ್‌ಸ್ಾರ್ಮರ್ ಬೀಳುವ ಸ್ಥಿತಿಯಲ್ಲಿ ಇರುವುದರಿಂದ ಮಹಿಳಾ ಸಮುದಾಯ ಭವನ ಹಾಗೂ 5 ಮತ್ತು 6 ನೇ ಅಂಗನವಾಡಿ ಕೇಂದ್ರಗಳ ಮೇಲೆ ವಿದ್ಯುತ್ ತಂತಿಗಳು ಜೋತು ಬಿದ್ದಿದೆ. 2 ಅಂಗನವಾಡಿ ಕೇಂದ್ರಗಳಲ್ಲೂ ಸುಮಾರು 50 ಕ್ಕಿಂತಲೂ ಹೆಚ್ಚಿನ ಮಕ್ಕಳು ಇರುವುದರಿಂದ, ಮಹಿಳಾ ಸಮುದಾಯ ಭವನದಲ್ಲಿ ಆಗಾಗ ಕೆಲವು ಕಾರ್ಯಕ್ರಮಗಳು ನಡೆಯುವುದರಿಂದ ಜೋತುಬಿದ್ದಿರುವ ವಿದ್ಯುತ್ ತಂತಿಗಳಿಂದ ಸಮಸ್ಯೆ ಎದುರಾಗಬಹುದು ಎಂಬ ಆತಂಕವನ್ನು ನಿವಾಸಿಗಳು ವ್ಯಕ್ತಪಡಿಸಿದ್ದಾರೆ. ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳ ಆವರಣದಲ್ಲಿ ವಿದ್ಯುತ್ ತಂತಿಗಳು ಹಾದುಹೋಗಬಾರದು ಎಂದು ಹೈಕೋರ್ಟ್ ಆದೇಶವೂ ಇದ್ದು, ಆದರೂ ಅಂಗನವಾಡಿ ಕೇಂದ್ರಗಳ ಮೇಲೆ ವಿದ್ಯುತ್ ತಂತಿಗಳು ಹಾದುಹೋಗಿದ್ದರೂ ವಿದ್ಯುತ್ ಇಲಾಖೆಯವರು ಯಾವುದೇ ಕ್ರಮವಹಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.
ಇತ್ತೀಚೆಗೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಗ್ರಾಮದ 4 ಮತ್ತು 5 ನೇ ವಾರ್ಡ್‌ನಲ್ಲಿರುವ ಟ್ರಾನ್‌ಸ್ಾರ್ಮರ್ ರಸ್ತೆಯ ಕಡೆಗೆ ಭಾಗಿಕೊಂಡಿದೆ. ಇದರಿಂದಾಗಿ ಸಾರ್ವಜನಿಕರು ಆತಂಕದಲ್ಲಿದ್ದಾರೆ. ಸಮೀಪದಲ್ಲೇ ಸಮುದಾಯಬ ಭವನ, ಅಂಗನವಾಡಿ ಕೇಂದ್ರಗಳು ಇದ್ದು, ಅದರ ಮೇಲೆಯೇ ವಿದ್ಯುತ್ ತಂತಿಗಳು ಜೋತು ಬಿದ್ದಿದೆ. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಅವಘಡಗಳನ್ನು ತಪ್ಪಿಸಲು ಕೂಡಲೇ ಟ್ರಾನ್‌ಸ್ಾರ್ಮರ್ ಅನ್ನು ತೆರವುಗೊಳಿಸಬೇಕು.
-ಸಂತೋಷ್, ನಿವಾಸಿ, ನಾಗವಳ್ಳಿ, ಚಾಮರಾಜನಗರ
ಈಗಷ್ಟೇ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ಕೂಡಲೇ ಸ್ಥಳಪರಿಶೀಲನೆ ಮಾಡುವಂತೆ ಸೂಚನೆ ನೀಡುತ್ತೇನೆ. ಆದಷ್ಟು ಬೇಗ ಸಮಸ್ಯೆ ಪರಿಹಾರ ಕಲ್ಪಿಸುತ್ತೇವೆ.
-ಮುದ್ದುರಾಜು, ಎಇಇ, ಸಂತೇಮರಹಳ್ಳಿ, ಚಾಮರಾಜನಗರ