ಅಪಾಯಕ್ಕೆ ಆಹ್ವಾನಿಸುತ್ತಿರುವ ತೆರೆದ ಬಾವಿ

ydg4
ಕೊಡೇಕಲ್ ಸಮೀಪದ ದಾಸರಗೋಟ ಗ್ರಾಮದ ರಸ್ತೆ ಬದಿ ಇರುವ ತೆರೆದ ಬಾವಿ ಅಪಾಯಕ್ಕೆ ಆಹ್ವಾನಿಸುವಂತಿರುವುದು.
Published on

ಕೊಡೇಕಲ್: ಗ್ರಾಮದ ಜನತೆಗೆ ನೀರುಣಿಸಿದ ತೆರೆದ ಬಾವಿಯೊಂದು ಅಪಾಯಕ್ಕೆ ಆಹ್ವಾನಿಸುತ್ತಿದ್ದು, ಕೂಡಲೇ ಈ ಬಾವಿಯ ಸುತ್ತಲು ತಂತಿ ಬೇಲಿ ಇಲ್ಲವೆ ತಡೆಗೋಡೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ದಾಸರಗೋಟ ಗ್ರಾಮದ ರಸ್ತೆ ಬದಿಯಲ್ಲಿರುವ ಈ ಬಾವಿ ಗ್ರಾಮದ ಜನರ ಕುಡಿಯುವ ನೀರಿಗೆ ಆಸರೆಯಾಗಿತ್ತು. ಆದರೆ ಈ ಬಾವಿ ಕ್ರಮೇಣವಾಗಿ ನೀರು ಬಳಕೆಯಾಗದೆ ಬಾವಿ ನೀರು ಕಲುಷಿತಗೊಂಡು ಬಳಕೆಗೆ ಬಾರದಂತಾಗಿದೆ. ಬಾವಿ ಪಕ್ಕದ ರಸ್ತೆಯಲ್ಲಿ ನಿತ್ಯ ನೂರಾರು ದ್ವಿಚಕ್ರ ಸೇರಿ ಅನೇಕ ವಾಹಗಳು ಸಂಚಾರ ಮಾಡುತ್ತವೆ. ಅಲ್ಲದೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕಾಗಿ ಭಕ್ತರು ಇದೇ ಮಾರ್ಗವಾಗಿ ದರ್ಶನಕ್ಕೆ ತೆರಳುತ್ತಾರೆ. ಹೀಗಾಗಿ ಕೂಡಲೇ ಈ ಬಾವಿಯ ಸುತ್ತಲು ತಡೆಗೋಡೆ ಇಲ್ಲವೇ ತಂತಿ ಬೇಲಿ ಅಳವಡಿಸಬೇಕು ಎಂದು ಕರವೇ ಗ್ರಾಮ ಘಟಕ ಅಧ್ಯಕ್ಷ ಕಾರ್ತಿಕ ಪಾಟೀಲ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net