ಅಪಾಯಕಾರಿ ಚಾಲನೆ ಪ್ರಕರಣ ದಾಖಲು

BUS
Published on

ಚಿತ್ರದುರ್ಗ: ಬಸ್ಸಿನ ಮೇಲೆ 25ರಿಂದ 30 ಮಂದಿಯನ್ನು ಹತ್ತಿಸಿಕೊಂಡು ಜೆಎಂಐಟಿ ವೃತ್ತದಿಂದ ಖಾಸಗಿ ಬಸ್ ನಿಲ್ದಾಣದ ಕಡೆಗೆ ಅಪಾಯಕಾರಿ ಚಾಲನೆಗೆ ಮುಂದಾದ ಕಾರಣ ಗುರುವಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸ್ವಯಂ ದೂರು ದಾಖಲಿಸಿಕೊಳ್ಳಲಾಗಿದೆ.

ಗಾದ್ರಿಲಿಂಗೇಶ್ವರ ಖಾಸಗಿ ಬಸ್ಸಿನ ಚಾಲಕ ಕೆಂಚೋಬಳಪ್ಪ, ನಿರ್ವಾಹಕ ದಿನೇಶ, ಮಾಲೀಕ ಎಸ್.ಜಯಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಾಣಾಪಾಯವಾಗುವಂತ ರೀತಿಯಲ್ಲಿ ಮುಂಬರುವ ದಿನಗಳಲ್ಲಿ ಬಸ್ಸು, ಟ್ರ್ಯಾಕ್ಸ್, ಆಟೋಗಳ ಮೇಲೆ ಹೆಚ್ಚಿನ ಜನರನ್ನು ಹತ್ತಿಸಿಕೊಂಡು ಕರೆದೊಯ್ಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net