

ಯಾದಗಿರಿ: ಮಳೆಯಿಂದಾಗಿ ನಗರದ ದೊಡ್ಡ ಕೆರೆಯಿಂದಾಗುವ ಅಪಾಯವನ್ನು ತಪ್ಪಿಸಲು ತಡೆ ಗೋಡೆ ನಿರ್ಮಿಸಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಹೇಳಿದರು.
ಬುಧವಾರ ವಾರ್ಡ್ ೫ರ ದೊಡ್ಡ ಕೆರೆ ಏರಿಯಾ ಮತ್ತು ದುರ್ಗಾ ನಗರದ ವಿವಿಧೆಡೆ ಮಿಂಚಿನ ಸಂಚಾರ ನಡೆಸಿ ಮಾಡಿ ಮಾತನಾಡಿದ ಅವರು, ಮಳೆಯಿಂದಾಗಿ ದೊಡ್ಡಕೆರೆಯಿಂದ ಶಾಲೆಗೆ ಹಾಗೂ ಅಕ್ಕ, ಪಕ್ಕದ ಮನೆಗಳಿಗೆ ನೀರು ನುಗ್ಗುತ್ತಿದ್ದು, ಕೂಡಲೇ ತಡೆಗೋಡೆ ನಿರ್ಮಿಸಲು ಅಂದಾಜು ವೆಚ್ಚ ಸಿದ್ಧಪಡಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಅದೇ ವಾರ್ಡ್ನ ದುರ್ಗಾ ನಗರದ ಸ್ಲಂ ಏರಿಯಾಕ್ಕೂ ಭೇಟಿ ನೀಡಿದ ಅವರು, ಅಕ್ಕ, ಪಕ್ಕ ಮನೆಗಳಿಗೆ ನೀರು ನುಗ್ಗಬಾರದು ಮತ್ತು ತಾಂಬರ್ ಕೆರೆ ಪಕ್ಕದಲ್ಲಿ ರಸ್ತೆ ಹಾಳಾಗಬಾರದು ಸ್ಟೋನ್ ಪೇಚಿಂಗ್ ಮಾಡಲು ಸಹ ತಾಕೀತು ಮಾಡಿದರು.
ಪ್ರಕೃತಿ ವಿಕೋಪ ನಿಧಿಯಡಿ ಮಂಜೂರು ಆಗಿರುವ ೨೫ ಲP್ಷÀ ರೂ. ವೆಚ್ಚದಲ್ಲಿ ಈ ಎರಡು ಕೆಲಸದ ಜತೆಗೆ ಸಣ್ಣ,ಪುಟ್ಟ ಕೆಲಸ ಮಾಡಲಾಗುವುದು ಎಂದರು.
ಸುಮಾರು ಒಂದು ತಾಸು ತಮ್ಮ ವಾರ್ಡ್ನ ವಿವಿಧಡೆ ಸಂಚರಿಸಿದ ಅವರು ಅಲ್ಲಿನ ಕೆಲ ಸ್ಥಳಗಳಲ್ಲಿ ವಿದ್ಯುತ್ ಕಂಬಗಳು ಚರಂಡಿ ಒಳಗಡೆ ಹೂತಿದ್ದ ಗಮನಿಸಿದ ಅವರು, ಅವುಗಳನ್ನು ಸ್ಥಳಾಂತರಿಸಬೇಕು. ಶಾಲೆ ಮುಂಭಾಗದಲ್ಲಿರುವ ಕಂಬಕ್ಕೆ ದೀಪ ಹಾಕಲು ಜೆಸ್ಕಾಂ ಅಧಿಕಾರಿಗೆ ಸೂಚನೆ ನೀಡಿದರು.
ಅಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜಿನ ಬಗ್ಗೆ ಮಾಹಿತಿ ಪಡೆದು, ಕೂಡಲೇ ಇದನ್ನು ಸರಿಪಡಿಸುವಂತೆಯೇ ಸ್ಥಳದಲ್ಲಿ ಇದ್ದ ಅಧಿಕಾರಿಗೆ ಹೇಳಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ ವಿಶ್ವನಾಥ ಪಾಟೀಲ್, ನಾಮ ನಿರ್ದೇಶನ ಸದಸ್ಯರಾದ ವೆಂಕಟೇಶ ನಾಗುಂಡಿ, ನಿಂಗಪ್ಪ ಜಾಲಗಾರ, ದುರ್ಗಪ್ಪ, ಸುಗಪ್ಪ ಇತರರಿದ್ದರು.