ಅಪಹರಿಸಿ ಹಲ್ಲೆ, ದರೋಡೆ ಒರ್ವನ ಬಂಧನ

CRIME-1
Published on

ಕಲಬುರಗಿ: ಟ್ರೇಡಿಂಗ್​ನಲ್ಲಿ ನಷ್ಟ ಮಾಡಿದ್ದಾನೆ ಎಂದು ವ್ಯಕ್ತಿಯೊಬ್ಬನನ್ನು ಅಪಹರಿಸಿ, ಮಾರಣಾಂತಿಕ ಹಲ್ಲೆ ಮಾಡಿ ದರೋಡೆ ಮಾಡಿದ ಪ್ರಕರಣದಲ್ಲಿ ರ‍್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುರೇಶ ಮಳ್ಳಿ ಬಂಧಿತ ಆರೋಪಿ. ನಗರದ ಸಂತೋಷ ಕಾಲನಿ ನಿವಾಸಿ ಟ್ರೇಡಿಂಗ್​ ಶಿಕ್ಷಕ ಆಕಾಶ ಊಡಗಿ ಹಲ್ಲೆಗೆ ಒಳಗಾದವ. ಹಲ್ಲೆ ಆರೋಪದಲ್ಲಿ ಸುರೇಶ ಮಳ್ಳಿ ಸೇರಿ ಇತರರ ವಿರುದ್ಧ ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಸುರೇಶ ಮಳ್ಳಿಯನ್ನು ಬಂಧಿಸಿದ್ದಾರೆ.

ಏನಿದು ಟನೆ: ಟ್ರೇಡಿಂಗ್​ ಶಿಕ್ಷಕ ಆಕಾಶಗೆ ಡಿಮ್ಯಾಟ್​ ಅಕೌಂಟ್​ ಮೂಲಕ ಹಣ ಹೂಡಿಕೆಗೆ ಸುರೇಶ ಮಳ್ಳಿ ನೀಡಿದ್ದರು. ಆರಂಭದಲ್ಲಿ ಆಕಾಶ ಲಾಭ ನೀಡಿದ್ದ, ನಂತರ ನಷ್ಟವಾದಾಗ ಸುರೇಶ ಹಣ ವಾಪಸ್​ ಪಡೆದಿದ್ದ. ಅಲ್ಲದೇ ನೀನೇ ಹಣ ಹೂಡಿ, ಲಾಭ ನನಗೆ ಕೊಡು ಎಂದು ಸುರೇಶನು ಆಕಾಶಗೆ ಒತ್ತಾಯ ಮಾಡಿದ್ದ. ನನ್ನಲ್ಲಿ ಹಣ ಇಲ್ಲ ಎಂದಿದ್ದಕ್ಕೆ ಆಕಾಶನನ್ನು ಮೇ ೨೦ರಂದು ಸ್ನೇಹಿತರ ಜತೆ ಕೂಡಿ ಅಪಹರಿಸಿ, ಹಲ್ಲೆ ಮಾಡಿ, ೭೨ ಸಾವಿರ ರೂ. ಕಿತ್ತುಕೊಂಡಿದ್ದರು. ಆಕಾಶ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದಾರೆ. ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net