

ಕಲಬುರಗಿ: ನಿವೇಶನದ ಮಾಲೀಕನನ್ನು ಖರೀದಿದಾರರು ಅಪಹರಿಸಿ, ನಿವೇಶನ ನಮ್ಮ ಕಬ್ಜಾದಲ್ಲಿ ಇಲ್ಲ. ಅದರ ಹಣ ವಾಪಸ್ ನೀಡುವಂತೆ ಬೆದರಿಸಿ ೩೦ ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡ ಘಟನೆ ನಡೆದಿದೆ. ಕಳೆದ ೧೦ ವರ್ಷದ ಹಿಂದೆ ಚಿತ್ತಾಪುರ ಪಟ್ಟಣದಲ್ಲಿ ವಸಂತರಾವ ಬಗಾಡೆ ಅವರಿಂದ ನಗರದ ವಿಜಯಸಿಂಗ್ ರಾಠೋಡ, ಜಯಸಿಂಗ್ ರಾಠೋಡ್ ೧೦ ನಿವೇಶನಗಳನ್ನು ಖರೀದಿಸಿದ್ದಾರೆ. ಆದರೆ ಇಷ್ಟು ವರ್ಷ ಸುಮ್ಮನಿದ್ದು, ಇತ್ತೀಚೆಗೆ ವಸಂತರಾವ ಅವರನ್ನು ಬೆದರಿಸಿ, ನೀವು ನೀಡಿದ ನಿವೇಶನಗಳು ನಮ್ಮ ಕಬ್ಜಾದಲ್ಲಿ ಇಲ್ಲ. ನಮ್ಮ ಹಣ ನಮಗೆ ವಾಪಸ್ ನೀಡಿ ಎಂದು ಕೇಳಿದ್ದಾರೆ. ಇದನ್ನು ನಿರಾಕರಿಸಿದ ವಸಂತರಾವ, ೧೦ ವರ್ಷದ ಹಿಂದೆಯೇ ಎಲ್ಲ ಪ್ರಕ್ರಿಯೆ ಮಾಡಿ, ನಿವೇಶನ ಮಾರಾಟ ಮಾಡಿz್ದÉÃನೆ. ಇಷ್ಟು ವರ್ಷ ಸುಮ್ಮನಿದ್ದು, ಈಗೇಕೆ ಕೇಳುತ್ತಿದ್ದೀರಿ ಎಂದಿದ್ದಾರೆ. ಇದರಿಂದ ಕುಪಿತರಾದ ಆರೋಪಿಗಳಾದ ವಿಜಯಸಿಂಗ್ ರಾಠೋಡ್, ಜಯಸಿಂಗ್ ರಾಠೋಡ್ ವಸಂತರಾವ ನಗರಕ್ಕೆ ಭೇಟಿ ನೀಡಿದ್ದ ವೇಳೆ ದಾಳಿ ಮಾಡಿ, ಹಲ್ಲೆ ನಡೆಸಿ, ಕಾರ್‌ನಲ್ಲಿ ಅಪಹರಿಸಿ, ಕುತ್ತಿಗೆಗೆ ಚಾಕು ಇಟ್ಟು ಚಿತ್ತಾಪುರದ ಬ್ಯಾಂಕ್‌ಗೆ ಕರೆದೊಯ್ದು ೩೦ ಲಕ್ಷ ಆರ್‌ಟಿಜಿಸಿ ಮಾಡಿಸಿಕೊಂಡಿದ್ದಾರೆ. ೪೫ ಲಕ್ಷ ರೂ. ಚೆಕ್ ಬರೆಸಿಕೊಂಡಿದ್ದಾರೆ ಎಂದು ವಸಂತರಾವ ಸ್ಟೇಷನ್ ಬಜಾರ್ ಠಾಣೆಗೆ ದೂರು ನೀಡಿದ್ದಾರೆ.