ಅಪಸ್ಮಾರದೆಡೆ ಬೇಡ ತಪ್ಪು ಕಲ್ಪನೆ

ctd....2
Published on

ಚಿತ್ರದುರ್ಗ: ಅಪಸ್ಮಾರ ರೋಗದೆಡೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕಿದೆ ಎಂದು ಡಿಎಲ್‌ಒ ಡಾ.ನಾಗರಾಜ್ ಹೇಳಿದರು. ಜಿ ಲ್ಲಾಸ್ಪತ್ರೆ ಬಿಸಿರಾಯ್ ಸಂಭಾಗಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಅಪಸ್ಮಾರ ದಿನಾಚರಣೆಯಲ್ಲಿ ಮಾತನಾಡಿ, ಅಪಸ್ಮಾರ ರೋ ಗಕ್ಕೆ ಕಾರಣವಾಗುವಂಥ ಅಂಶಗಳನ್ನು ವಿವರಿಸಿದರು. ಮದ್ಯಪಾನದಂಥ ದುಶ್ಚಟಗಳಿಂದ ದೂರವಿರಬೇಕೆಂದರು.

ಜಿಲ್ಲಾಸ್ಪತ್ರೆ ನರರೋಗ ತಜ್ಞ ಡಾಕಿರಣ್‌ಗೌಡ, ಅಪಸ್ಮಾರವಿರುವ ವ್ಯಕ್ತಿಗಳು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದರು. ಎಬಿಆರ್‌ಕೆ ಜಿಲ್ಲಾ ಸಂಯೋಜಕ ಡಾ.ಚಂದ್ರಶೇಖರ್,ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್,ಕ್ಲಿನಿಕಲ್ ಸೈಕಲಾಜಿ ಸ್ಟ್ ಶ್ರೀಧರ್,ಪಿ.ಶರತ್,ಮೂಗಪ್ಪ,ತಿಪ್ಪೇಸ್ವಾಮಿ,ಜಿ.ಜೆ. ದಿವ್ಯಾ,ಕೆ.ಭಾವನಾ, ರೂಪಾ ಚಾವಡಿ ಮತ್ತಿತರರು ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net