ಅಪರೂಪದ ಹಾರಂಬೆ ಹಾವು ಪ್ರತ್ಯಕ್ಷ

15hos2p snake
Published on

ನಗರ: ಬಿದನೂರು ನಗರದ ಮುಕುಂದ ಕಾಮತ್ ಎಂಬುವರ ಮನೆಯಂಗಳದಲ್ಲಿ ಶುಕ್ರವಾರ 20 ಇಂಚು ಉದ್ದವಿರುವ ಅಪರೂಪದ ಹಾರಂಬೆ ಹಾವು (ಆರ್ನೆಟ್ ಫ್ಲೈಯಿಂಗ್ ಸ್ನೇಕ್) ಪ್ರತ್ಯಕ್ಷವಾಗಿದೆ. ಕೆಂಪು, ಕಪ್ಪು ಮತ್ತು ಹಳದಿ ಬಣ್ಣದ ಪಟ್ಟೆ ಹೊಂದಿರುವ ಈ ಹಾವು ಸ್ವಲ್ಪಮಟ್ಟಿನ ವಿಷಕಾರಿ. ಇದು ಪಶ್ಚಿಮಘಟ್ಟ ಪ್ರದೇಶದಲ್ಲಿ ಕಂಡು ಬರುವ ಅತಿ ಅಪರೂಪದ ಹಾವು. ಇದಕ್ಕೆ ಹಾರುವ ಹಾವು ಎಂದು ಹೆಸರಿದ್ದರೂ ವಾಸ್ತವವಾಗಿ ಹಾರುವುದಿಲ್ಲ. ಬದಲಿಗೆ ಎತ್ತರದ ಮರ ಅಥವಾ ಗಿಡದಿಂದ ಕೆಳಕ್ಕೆ ಜಿಗಿಯುತ್ತದೆ ಎಂದು ಉರಗತಜ್ಞ ನಾರಾಯಣ ಕಾಮತ್ ತಿಳಿಸಿದರು. ಈ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು. ಡಿಆರ್​ಎಫ್​ಒ ಎಸ್.ವಿ.ಮಧುಕರ್ ಜತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net