ಅಪರೂಪದ ಶರಣೆ ಮಹಾದೇವಮ್ಮ ತಾಯಿ

20kmr1
Published on

ಕಮಲನಗರ: ಅಂಗವಿಕಲೆಯಾಗಿದ್ದರೂ ಹಗಲಿರುಳೆನ್ನದೇ ಬಸವ ತತ್ವ ಪ್ರಸಾರ-ಪ್ರಚಾರದಲ್ಲಿ ತೊಡಗಿಸಿಕೊಂಡ ಅಪರೂಪದ ಶರಣೆ ಮಹಾದೇವಮ್ಮ ತಾಯಿ ಎಂದು ನಿವೃತ್ತ ಪ್ರಾಚಾರ್ಯ ಡಾ.ಎಸ್‌ಎಸ್ ಮೈನಾಳೆ ಹೇಳಿದರು.

ಖೇಡ್-ಸಂಗಮ ಗ್ರಾಮದ ಡಾ.ಚನ್ನಬಸವ ಪಟ್ಟದ್ದೇವರ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳ ದಿನಾಚರಣೆ ಮತ್ತು ನೀಲಾಂಬಿಕೆ ಆಶ್ರಮದ ಮಹಾದೇವಮ್ಮ ತಾಯಿ ಅವರಿಗೆ ಗೌರವ ಡಾಕ್ಟರೇಟ್ ಮತ್ತು ಕಾಯಕ ಸಮ್ಮಾನ ಪ್ರಶಸ್ತಿಗೆ ಭಾಜನರಾದ ಪ್ರಯುಕ್ತ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ವಚನ ಸಾಹಿತ್ಯ ಭಂಡಾರಿಯಾದ ಮಹಾದೇವಮ್ಮ ತಾಯಿ ಸ್ವಂತ ನಾಟಕ ರಚಿಸಿ ಪ್ರಯೋಗ ಮಾಡಿದ್ದಾರೆ. ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದನ್ನು ತೋರಿಸಿಕೊಟ್ಟ ಅವರ ಸಾಧನೆ ಶರಣರ ಕಾಯಕ ಮತ್ತು ದಾಸೋಹ ತತ್ವ ಮೀರಿಸುವಂತಿದೆ. ಜಾತಿ ಮತ್ತು ಧರ್ಮ ಮೀರಿ ಪ್ರತಿಯೊಬ್ಬರಿಗೆ ವಚನಗಳ ಜ್ಞಾನ ದೀವಿಗೆ ಹೊತ್ತಿಸಿ ಸಮಾನತೆ ಬೆಳಕನ್ನು ತೋರಿದ್ದಾರೆ ಎಂದು ಬಣ್ಣಿಸಿದರು.

ಸ್ಥಾನಿಕ ಸಮಿತಿ ಅಧ್ಯಕ್ಷ ನೀಲಕಂಠರಾವ ಬಿರಾದಾರ ಮಾತನಾಡಿ, ಗುರುಕುಲ ಮಕ್ಕಳಲ್ಲಿ ಅಗಾಧ ಪ್ರತಿಭೆ ಇದೆ. ಶೈಕ್ಷಣಿಕ ಸವಾಲುಗಳನ್ನು ಎದುರಿಸಿ ಪಾಲಕರು ಮತ್ತು ಶಿಕ್ಷಕರು ಸೇರಿ ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.

ಮುಖ್ಯಗುರು ಸಂಪೂರ್ಣ ಕರಿಮಣಿ, ಕಿರಣ ದಾನಾ, ಪ್ರದೀಪ ದಾನಾ, ಶಿಕ್ಷಕರಾದ ಬಸವರಾಜ ಚಿಂದೆ, ಪುಷ್ಪಾವತಿ ಬಿರಾದಾರ, ಶಿವಕುಮಾರ ಸ್ವಾಮಿ, ಸುರೇಶ ನೀಲಕಂಠ, ರವಿ ಕಾಳೆ, ರೇಷ್ಮಾ ಹೊಳಸಂಬ್ರೆ, ಪ್ರೇಮಾ ಅಂಬಿಗ ಇತರರಿದ್ದರು. ಸಂಜೀಕುಮಾರ ಮೆಂಗಾ ಸ್ವಾಗತಿಸಿ, ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net