ಅಪರಿಚಿತ ವಾಹನ ಡಿಕ್ಕಿಯಾಗಿ ಬಾಲಕ ಸಾವು

accident-15
Published on

ಹಾಸನ: ಆಲೂರು ತಾಲ್ಲೂಕಿನ ವಾಟೆಪುರ ಸಮೀಪ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟಿರುವ ಘಟನೆ ಮಂಗಳವಾರ ನಡೆದಿದೆ.

ಕೆ.ಹೊಸಕೋಟೆ ಹೋಬಳಿ ಬೋಸ್ಮಾನಹಳ್ಳಿ ಗ್ರಾಮದ ಲಲಿತಾ-ಲಕ್ಷ್ಮಣ ಅವರ ಪುತ್ರ ಬಿ.ಎಲ್ ಗಿರೀಶ್ (16) ಮೃತ ದುರ್ದೈವಿ.ಈತ ಸ್ನೇಹಿತನಿಗೆ ಪುಸ್ತಕ ಕೊಡಲೆಂದು ಬೈಕ್‌ನಲ್ಲಿ ಬಳೇರಕೊಪ್ಪಲಿಗೆ ಹೋಗಿ ವಾಪಸ್ ಬೋಸ್ಮಾನಹಳ್ಳಿಗೆ ಬರುತ್ತಿದ್ದ. ಈ ವೇಳೆ ಮಗ್ಗೆ-ಮಲಗಳಲೆ ರಸ್ತೆಯ ವಾಟೆಪುರ ಸಮೀಪ ರಸ್ತೆ ಎಡಬದಿಯಲ್ಲಿ ಬೈಕ್ ಓಡಿಸಿಕೊಂಡು ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಯಾವುದೋ ವಾಹನ ಬೈಕಿಗೆ ಡಿಕ್ಕಿ ಹೊಡೆದಿದ್ದರಿಂದ ತಲೆ ಹಾಗು ಕಾಲುಗಳಿಗೆ ತೀವ್ರಸ್ವರೂಪದ ರಕ್ತಗಾಯಗಳಾದ ಗಿರೀಶ್‌ನನ್ನು ಆಲೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಈ ಬಗ್ಗೆ ಆಲೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net