

ಕೆ.ಆರ್.ಸಾಗರ : ಮೊಗರಹಳ್ಳಿ ಗ್ರಾಮದ ಬಳಿ ಇರುವ ವರುಣಾ ನಾಲೆಯಲ್ಲಿ 35 ರಿಂದ 40 ವರ್ಷದ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ. ಸಾರ್ವಜನಿಕು ನೀಡಿದ ಮಾಹಿತಿ ಮೇರೆಗೆ ಕೆ.ಆರ್.ಸಾಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ನಾಲೆಯಿಂದ ಹೊರ ತೆಗೆದು ಮೈಸೂರು ಕೆ.ಆರ್.ಆಸ್ಪತ್ರೆ ಶವಗಾರದಲ್ಲಿರಿಸಿದ್ದಾರೆ. ಸುಮಾರು 5 ಅಡಿ ಎತ್ತರ, ಗುಂಡು ಮುಖ, ಕತ್ತಿನಲ್ಲಿ ಚಿನ್ನದ ತಾಳಿ ಹಾಗೂ ಸರ, ಕಿವಿಗೆ ಒಲೆ ಇದೆ. ಎರಡೂ ಕಾಲಿನಲ್ಲಿ ಗೆಜ್ಜೆ ಇದೆ. ಕಪ್ಪು ಬಣ್ಣದ ಚೂಡಿದಾರ್ ಧರಿಸಿದ ಮಹಿಳೆ ಬಗ್ಗೆ ಮಾಹಿತಿ ಇದ್ದವರು ಕೆ.ಆರ್.ಸಾಗರ ಪೊಲೀಸ್ ಠಾಣೆ (ಮೊ: 948084856) ಸಂಪರ್ಕಿಸಲು ಪೊಲೀಸ್ ಪ್ರಕಟಣೆ ತಿಳಿಸಿದೆ.